ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಜೋಡಣೆ ಮಾಡಲು ಗಡುವು ದಿನಾಂಕ ಸಮೀಪಿಸುತ್ತಿದೆ. ಇದೇ ಮಾರ್ಚ್ 31 ರೊಳಗೆ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಬೇಕಿದೆ.
ಆದಾಯ ತೆರಿಗೆ ಇಲಾಖೆ ನೀಡಿರುವ ಸೂಚನೆಯ ಅನ್ವಯ ಮಾರ್ಚ್ 31 ರೊಳಗೆ ಪಾನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆ ಮಾಡಬೇಕಿದೆ. https://www.incometaxindiaefiling.gov.ing ವೆಬ್ ಸೈಟ್ ಗೆ ಭೇಟಿ ನೀಡಿ ಸೂಚನೆಗಳನ್ನು ಅನುಸರಿಸಿ ಆಧಾರ್ ಜೋಡಣೆ ಮಾಡಬಹುದಾಗಿದೆ.
ಇದಲ್ಲದೆ ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ಎಸ್ಎಂಎಸ್ ಬಳಸಿಕೊಂಡು ಕೂಡ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಜೋಡಣೆ ಮಾಡಬಹುದಾಗಿದೆ. ಇದಕ್ಕಾಗಿ 12 ವಿಶಿಷ್ಟ ಸಂಖ್ಯೆಗಳನ್ನು 567678, 56161 ಗೆ ಎಸ್ಎಂಎಸ್ ಮಾಡಬಹುದಾಗಿದೆ. UIDPAN<space>12-digit Aadhaar><space>10-digit PAN ಹೀಗೆ ಸಂದೇಶ ಕಳುಹಿಸಿ ಲಿಂಕ್ ಮಾಡಬಹುದಾಗಿದೆ.