ನವದೆಹಲಿ: ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೋಡಣೆ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಮಾರ್ಚ್ 31 ರೊಳಗೆ ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಮಾತ್ರವಲ್ಲ, ಆದಾಯ ತೆರಿಗೆ ಕಾಯ್ದೆ ಪ್ರಕಾರ, ದಂಡವನ್ನು ವಿಧಿಸಲಾಗುವುದು.
ಹಣಕಾಸು ವಹಿವಾಟುಗಳಿಗೆ ಅಗತ್ಯವಾಗಿದೆ. ಒಂದು ವೇಳೆ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ವಹಿವಾಟು ನಡೆಸಲು ತೊಂದರೆಯಾಗುತ್ತದೆ. ಕೆಲ ನಿರ್ದಿಷ್ಟ ವಿನಾಯಿತಿ ಹೊರತಾಗಿ ಐಟಿ ರಿಟರ್ನ್ಸ್ ಸಲ್ಲಿಸುವಾಗ ಮತ್ತು ಹಣಕಾಸಿಗೆ ಸಂಬಂಧಿಸಿದ ಕೆಲಸಗಳಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.