alex Certify ಅಡುಗೆ ಎಣ್ಣೆ ದರ ಏರಿಕೆಯಿಂದ ತತ್ತರಿಸಿದವರಿಗೆ ಮತ್ತೊಂದು ಶಾಕ್: ತಾಳೆ ಎಣ್ಣೆ ದರ ಶೇಕಡ 6 ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಎಣ್ಣೆ ದರ ಏರಿಕೆಯಿಂದ ತತ್ತರಿಸಿದವರಿಗೆ ಮತ್ತೊಂದು ಶಾಕ್: ತಾಳೆ ಎಣ್ಣೆ ದರ ಶೇಕಡ 6 ರಷ್ಟು ಹೆಚ್ಚಳ

App Note Library - Fats & Oils - Keit Spectrometers

ನವದೆಹಲಿ: ದೇಶದಲ್ಲಿ ಅಡುಗೆ ಎಣ್ಣೆ ದರ ಭಾರಿ ಏರಿಕೆಯಾದ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ಆಮದು ಸುಂಕ ಕಡಿತ ಮಾಡಿದೆ. ಆದರೆ, ದರ ಕಡಿಮೆಯಾಗುವ ಬದಲು ದುಬಾರಿಯಾಗಿಯೇ ಮುಂದುವರೆದಿದೆ.

ತಾಳೆ ಎಣ್ಣೆ ಆಮದು ಸುಂಕ ಕಡಿತವಾದರೂ ಕೂಡ ದೇಶದಲ್ಲಿ ದರ ಶೇಕಡ 6 ರಷ್ಟು ಜಾಸ್ತಿಯಾಗಿದೆ. ಆಮದು ದರ ಕಡಿತದ ನಂತರವೂ ಯಾವುದೇ ಪ್ರಭಾವ ಬೀರಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಸುಂಕ ಕಡಿತಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ದೇಶದಲ್ಲಿ ಅಡುಗೆ ಎಣ್ಣೆ ದರ ಕಳೆದ ವರ್ಷದಿಂದ ಏರುಗತಿಯಲ್ಲಿ ಸಾಗುತ್ತಿದೆ. ಇದರ ಪರಿಣಾಮ ಬಡವರು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಇದನ್ನು ಮನಗಂಡ ಸರ್ಕಾರ ತಾಳೆ ಎಣ್ಣೆ ಆಮದು ಸುಂಕ ಇಳಿಕೆ ಮಾಡಿದೆ. ಆದರೂ ತಾಳೆ ಎಣ್ಣೆ ದರ ಏರಿಕೆಯಾಗಿದೆ. ಆಮದು ಸುಂಕ ಕಡಿತವಾದ ನಂತರ ಕೂಡ ಮಾರುಕಟ್ಟೆಯಲ್ಲಿ ಮಲೇಷ್ಯಾ ಮೂಲದ ತಾಳೆ ಎಣ್ಣೆ ದರ ಶೇಕಡ 9 ರಷ್ಟು ಹೆಚ್ಚಾಗಿದೆ. ಸರ್ಕಾರ ಆಮದು ಸುಂಕವನ್ನು ಶೇಕಡ 5 ರಷ್ಟು ಕಡಿತಗೊಳಿಸಿದ ನಂತರ ಪೂರೈಕೆದಾರರು ದರ ಏರಿಸಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಸುಂಕ ಕಡಿತಗೊಳಿಸಿದ್ದರೂ ಗ್ರಾಹಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...