ಬೆಂಗಳೂರು: ಭತ್ತಕ್ಕೆ ಈ ಬಾರಿ ಉತ್ತಮ ಬೆಲೆ ಬಂದಿದೆ. ದಾಖಲೆಯ ಪ್ರಮಾಣದಲ್ಲಿ ಭತ್ತದ ದರ ಏರಿಕೆ ಕಂಡಿದೆ. ಕ್ವಿಂಟಲ್ ಭತ್ತಕ್ಕೆ 3000 -3400 ರೂ.ವರೆಗೆ ಭತ್ತದ ಬೆಲೆ ಇದೆ. ಇದರೊಂದಿಗೆ ಅಕ್ಕಿ ದರ ಕೂಡ ಏರು ಗತಿಯಲ್ಲಿ ಸಾಗಿದೆ.
ಐಇಟಿ ಭತ್ತದ ದರ ಕ್ವಿಂಟಲ್ ಗೆ 3,000 ರೂ., ತುಂಗಾ ತಳಿಯ ಭತ್ತದ ದರ 2100 ರೂ., ಸೋನಾಮಸೂರಿ ಭತ್ತ ಕ್ವಿಂಟಲ್ ಗೆ 3000 ರೂ. ಇದೆ.
ಭತ್ತದ ದರ ಜೊತೆಗೆ ಅಕ್ಕಿ ದರ ಕೂಡ ಏರಿಕೆಯಾಗಿದ್ದು, ಒಂದು ಕ್ವಿಂಟಲ್ ಗೆ 5500 – 6000 ರೂ.ಗೆ ಏರಿಕೆ ಕಂಡಿದೆ. ಸೋನಾಮಸೂರಿ ಅಕ್ಕಿ ದರ ಕ್ವಿಂಟಲ್ ಗೆ 5150 ರೂ. ನಿಂದ 5250 ರೂ.ವರೆಗೆ ಇದೆ. ಇನ್ನು ಎರಡು ತಿಂಗಳಲ್ಲಿ ಈ ಅಕ್ಕಿ ದರ 7500 ರೂ. ಗೆ ತಲುಪುವ ಸಾಧ್ಯತೆ ಇದೆ.
ಆರ್.ಎನ್.ಆರ್. ತಳಿಯ ಅಕ್ಕಿದರ 5,500 ರೂ. ಇದ್ದು, 7750- 8000 ರೂ. ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇದೆ ಅವಧಿಯಲ್ಲಿ ಸೋನಾ ಮಸೂರಿ ಅಕ್ಕಿ ದರ ಕ್ವಿಂಟಲ್ ಗೆ 3200-3500 ರೂ.ವರೆಗೆ ಇತ್ತು.