ಬೆಂಗಳೂರು: ಅನೇಕ ಕಡೆ ಭತ್ತದ ಕಟಾವು ನಡೆದಿದೆ. ಮತ್ತೆ ಕೆಲವೆಡೆ ಮಳೆಯ ಕಾರಣ ಕೊಯ್ಲು ವಿಳಂಬವಾಗಿದೆ. ಇದರಿಂದಾಗಿ ಕೈಗೆ ಬಂದ ಬೆಳೆ ಮಳೆಗೆ ಹಾಳಾಗುವಂತಾಗಿದೆ. ಹೀಗಿರುವಾಗಲೇ ಭತ್ತದ ದರ ಕುಸಿದಿದೆ. ಇನ್ನು ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ 1940 ರೂಪಾಯಿ, ಎ ಗ್ರೇಡ್ ಭತ್ತಕ್ಕೆ 1960 ರೂಪಾಯಿ ದರ ನಿಗದಿಪಡಿಸಿದೆ. ಖರೀದಿ ಕೇಂದ್ರ ಆರಂಭವಾಗಿಲ್ಲ. ಈ ಕಾರಣದಿಂದ ಮುಕ್ತ ಮಾರುಕಟ್ಟೆಯಲ್ಲಿ 1500 ರೂ.ಗೆ ವರ್ತಕರಿಗೆ ಮಾರುವ ಪರಿಸ್ಥಿತಿ ಇದೆ.
ಕೆಲವು ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳು ತೆರೆದಿಲ್ಲ. ಭತ್ತ ಕಟಾವು ಮಾಡಲು ಜಿಟಿಜಿಟಿ ಮಳೆ ಅಡ್ಡಿಯಾಗಿದೆ. ಕೊಯ್ಲು ವಿಳಂಬವಾಗಿದೆ. ಕೊಯ್ಲು ಮಾಡಿದ ಭತ್ತವನ್ನು ದಾಸ್ತಾನು ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.