ಬೆಂಗಳೂರು: ಲಾಕ್ಡೌನ್ ಮುಂದುವರೆದರೆ ವಿಶೇಷ ಪ್ಯಾಕೇಜ್ ನೀಡಲಾಗುವುದು. ಕೊರೋನಾ ತಡೆಗೆ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡಿರುವುದರಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡಲು ಚಿಂತನೆ ನಡೆದಿದೆ.
ಬೀದಿಬದಿ ವ್ಯಾಪಾರಿಗಳು, ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಹೋಟೆಲ್ ಸಿಬ್ಬಂದಿ, ರೈತರಿಗೆ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ಲಾನ್ ಆಫ್ ಆಕ್ಷನ್ ಸಿದ್ದಪಡಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಆರ್ಥಿಕ ಸಂಕಷ್ಟದ ವೇಳೆ ಪ್ಯಾಕೇಜ್ ಹೇಗೆ ಘೋಷಿಸಬಹುದು? ಜನ, ಸರ್ಕಾರದ ಮೇಲೆ ಹೇಗೆ ಹೊರೆ ಕಡಿಮೆ ಮಾಡಬಹುದು, ಆರ್ಥಿಕ ಹಿನ್ನಡೆಯ ನಡುವೆ ಪ್ಯಾಕೇಜ್ ಹೇಗೆ ಘೋಷಿಸಬೇಕು? ಪ್ಯಾಕೇಜ್ ಘೋಷಣೆಗೆ ಯಾವ ಯಾವ ಮಾರ್ಗಗಳು ಇವೆ. ಈ ಬಗ್ಗೆ ಪ್ಲಾನ್ ಸಿದ್ದಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.