ಸ್ವಿಗ್ಗಿ ನಂತ್ರ ಓಯೋ ಕಂಪನಿ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಮೇ ತಿಂಗಳಲ್ಲಿ ಉದ್ಯೋಗಿಗಳ ಕೆಲಸದ ದಿನವನ್ನು ಬದಲಿಸಿದೆ. ಓಯೋ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಿದ್ರೆ ಸಾಕು. ಉಳಿದ ಎರಡು ದಿನ ರಜೆ ತೆಗೆದುಕೊಳ್ಳಬಹುದು.
ಓಯೋ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್‌ವಾಲ್ ನೌಕರರಿಗೆ ಈ ಸಂಬಂಧ ಇ-ಮೇಲ್ ಕಳುಹಿಸಿದ್ದಾರೆ. ಮುಂದಿನ ಮೂರು ಬುಧವಾರ ಮೇ 19, ಮೇ 26 ಮತ್ತು ಜೂನ್ 2 ರಂದು ಕಂಪನಿ ನೌಕರರಿಗೆ ರಜೆ ಘೋಷಿಸಿದೆ. ವೈಯಕ್ತಿಕ ಕೆಲಸ ಮುಗಿಸಿ, ಮಕ್ಕಳೊಂದಿಗೆ ಸಮಯ ಕಳೆಯಿರಿ, ಪ್ರೀತಿಪಾತ್ರರನ್ನು ನೋಡಿಕೊಳ್ಳಿ ಎಂದು ಕಂಪನಿ ಹೇಳಿದೆ. ಪರಿಸ್ಥಿತಿ ಜೂನ್ ನಲ್ಲಿಯೂ ಮುಂದುವರೆದರೆ ಮತ್ತೆ ವಿಚಾರ ಮಾಡುವುದಾಗಿ ಕಂಪನಿ ಹೇಳಿದೆ.
ನೌಕರರು ಅಗತ್ಯವಿದ್ದಾಗ ರಜೆ ತೆಗೆದುಕೊಳ್ಳಬಹುದು. ಇದನ್ನು ಪಾವತಿ ರಜೆಯಾಗಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಈ ರಜೆ ಪಡೆಯಲು ಯಾವುದೇ ಕಾರಣ ಹೇಳಬೇಕಾಗಿಲ್ಲವೆಂದು ಕಂಪನಿ ಹೇಳಿದೆ. ಸ್ವಿಗ್ಗಿ ಕೂಡ ಮೇ ತಿಂಗಳಿನಲ್ಲಿಯೇ ವಾರದಲ್ಲಿ ಎರಡು ದಿನ ರಜೆ ಘೋಷಣೆ ಮಾಡಿದೆ.