alex Certify ಆನ್ ​ಲೈನ್​ ಮಾರುಕಟ್ಟೆಯಲ್ಲೂ ಲಭ್ಯ ಆಕ್ಸಿಜನ್‌ ಕಾನ್ಸ್ಟ್ರೇಟರ್…! ಖರೀದಿಸಲು ಬಯಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ​ಲೈನ್​ ಮಾರುಕಟ್ಟೆಯಲ್ಲೂ ಲಭ್ಯ ಆಕ್ಸಿಜನ್‌ ಕಾನ್ಸ್ಟ್ರೇಟರ್…! ಖರೀದಿಸಲು ಬಯಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ 2ನೆ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ವೈದ್ಯಕೀಯ ಸೌಲಭ್ಯಗಳ ಕೊರತೆ ಕೂಡ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.‌

ಕೋವಿಡ್​ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಕಂಡು ಬರೋದ್ರಿಂದ ಆಕ್ಸಿಜನ್​ ಸಿಲಿಂಡರ್​ಗಳ ಅವಶ್ಯಕತೆ ಇರುತ್ತೆ. ಆದರೆ ಆಕ್ಸಿಜನ್​ ಸಿಲಿಂಡರ್​ಗಳ ಅಭಾವದಿಂದಾಗಿ ಸದ್ಯ ಆಕ್ಸಿಜನ್​ ಸಾಂದ್ರಕಗಳಿಗೆ ಬೆಲೆ ಹೆಚ್ಚಾಗಿದೆ.

ಆಮ್ಲಜನಕ ಸಾಂದ್ರಕಗಳು ಥೇಟ್​ ಆಕ್ಸಿಜನ್​ ಸಿಲಿಂಡರ್​​ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಈ ಸಾಂದ್ರಕಗಳು ವಾತಾವರಣದಿಂದ ಗಾಳಿಯನ್ನ ತೆಗೆದುಕೊಂಡು ಅದರಿಂದ ಆಮ್ಲಜನಕ ಸೋಸಿ ರೋಗಿಗಳಿಗೆ ಸರಬರಾಜು ಮಾಡುವ ಕಾರ್ಯ ಮಾಡುತ್ತವೆ.

ಆಮ್ಲಜನಕ ಸಾಂದ್ರಕಗಳು 5 ರಿಂದ 10 ಲೀಟರ್​​ ಆಕ್ಸಿಜನ್​​ಗಳನ್ನ ಉತ್ಪಾದಿಸಬಲ್ಲವು. ಅಲ್ಲದೇ ಈ ಆಮ್ಲಜನಕಗಳು 90 – 95 ಪ್ರತಿಶತ ಶುದ್ಧ ಆಮ್ಲಜನಕವನ್ನ ಉತ್ಪಾದಿಸುತ್ತವೆ.

ಆಕ್ಸಿಜನ್​ ಸಿಲಿಂಡರ್​ಗಳನ್ನ ಕಾಲ ಕಾಲಕ್ಕೆ ರೀ ಫಿಲ್​ ಮಾಡಬೇಕು. ಆದರೆ ಆಮ್ಲಜನಕ ಸಾಂದ್ರಕಗಳಿಗೆ ವಿದ್ಯುತ್​​​ ಸಂಪರ್ಕವೊಂದಿದ್ದರೆ ದಿನವಿಡೀ ಆಮ್ಲಜನಕವನ್ನ ಉತ್ಪಾದಿಸಲಿವೆ.

ಆಮ್ಲಜನಕ ಸಾಂದ್ರಕಗಳನ್ನ ನೀವು ಆನ್​ಲೈನ್​ ಹಾಗೂ ಸ್ಥಳೀಯ ಮಾರ್ಕೆಟ್​​ಗಳಿಂದ ಖರೀದಿ ಮಾಡಬಹುದಾಗಿದೆ. ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್​ನಂತಹ ಆನ್​ಲೈನ್​ ಮಾರುಕಟ್ಟೆ ಮೂಲಕವೂ ನೀವು ಇದನ್ನ ಖರೀದಿ ಮಾಡಬಹುದಾಗಿದೆ. ಆದರೆ ಸದ್ಯ ಆಮ್ಲಜನಕ ಸಾಂದ್ರಕಗಳಿಗೆ ಭಾರೀ ಡಿಮ್ಯಾಂಡ್​ ಇರೋದ್ರಿಂದ ಕೆಲವೊಂದು ಏರಿಯಾಗಳಲ್ಲಿ ಔಟ್​ ಆಫ್​ ಸ್ಟಾಕ್​ ಇರಲಿದೆ.

ಈ ಸಂದರ್ಭದಲ್ಲಿ ನೀವು ವೆಬ್​ಸೈಟ್​​ಗಳ ಮೂಲಕ ಸಾಂದ್ರಕಗಳನ್ನ ಖರೀದಿ ಮಾಡಬಹುದು. ಆದರೆ ಆಮ್ಲಜನಕ ಸಾಂದ್ರಕಗಳ ಹೆಸರಲ್ಲಿ ವಂಚನೆ ಮಾಡುತ್ತಿರೋದ್ರಿಂದ ಬಹಳ ಎಚ್ಚರಿಕೆ ವಹಿಸೋದು ಅಗತ್ಯ.

ಈ ವೆಬ್​ಸೈಟ್​ಗಳಲ್ಲಿ ನೀವು ಆಮ್ಲಜನಕ ಸಾಂದ್ರಕಗಳನ್ನ ಖರೀದಿ ಮಾಡಬಹುದಾಗಿದೆ :

1 ಎಂಜಿ : ಈ ವೆಬ್​ಸೈಟ್​ನಲ್ಲಿ ನಿಮಗೆ Equinox, Inogen, Oxlife ಕಂಪನಿಯ ಆಮ್ಲಜನಕ ಸಾಂದ್ರಕಗಳು ಸಿಗಲಿದೆ. 50 ಸಾವಿರ ರೂಪಾಯಿಯಿಂದ 295000 ರೂಪಾಯಿವರೆಗೆ ಸಾಂದ್ರಕಗಳು ಲಭ್ಯವಿದೆ.

ತುಷ್ಟಿ ಸ್ಟೋರ್​ : ಈ ವೆಬ್​ಸೈಟ್​ನಲ್ಲೂ ನಿಮಗೆ ಆಮ್ಲಜನಕ ಸಾಂದ್ರಕಗಳು ಲಭ್ಯವಿದೆ. 63 ಸಾವಿರ ರೂಪಾಯಿಯಿಂದ ಆರಂಭವಾಗಿ 1 ಲಕ್ಷ 25 ಸಾವಿರ ರೂಪಾಯಿವರೆಗೆ ಸಾಂದ್ರಕಗಳು ಲಭ್ಯವಿದೆ.

ನೈಂಟಿಗೇಲ್ಸ್ ಇಂಡಿಯಾ : ಈ ವೆಬ್​ಸೈಟ್​ನಲ್ಲಿ Philips, Oxymed, Devilbiss OC, Inogen, Olex OC ಕಂಪನಿಯ ಸಾಂದ್ರಕಗಳು 37,800 ರೂಪಾಯಿಯಿಂದ 2,15,000 ರೂಪಾಯಿ ಮೌಲ್ಯದಲ್ಲಿ ಲಭ್ಯವಿದೆ.

ಕಾಲ್​ಮೆಡ್​ : Greens OC, Nidek Nuvolite, Devilbiss, and Yuwell ಕಂಪನಿಯ ಆಮ್ಲಜನಕ ಸಾಂದ್ರಕಗಳು ಈ ವೆಬ್​ಸೈಟ್​​ನಲ್ಲಿ 34 ಸಾವಿರ ರೂಪಾಯಿ ಆರಂಭಿಕ ದರದಲ್ಲಿ ಲಭ್ಯವಿದೆ.

ಹೆಲ್ತ್​ ಕ್ಲಿನ್​ : Aspen, Equinox, Hemodiaz ಕಂಪನಿಯ ಆಮ್ಲಜನಕ ಸಾಂದ್ರಕಗಳು 35 ಸಾವಿರ ರೂಪಾಯಿ ಆರಂಭಿಕ ದರದಲ್ಲಿ ಲಭ್ಯವಿದೆ.

ದೇಶದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನ ಗಮನದಲ್ಲಿರಿಸಿ ಕೇಂದ್ರ ಸರ್ಕಾರ ಜುಲೈ 31ರ ಒಳಗೆ ವೈಯಕ್ತಿಯ ಬಳಕೆಗಾಗಿ ಆಮ್ಲಜನಕ ಸಾಂದ್ರಕಗಳನ್ನ ವಿದೇಶದಿಂದ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.

ಆಮ್ಲಜನಕ ಸಾಂದ್ರಕಗಳನ್ನ ವಿದೇಶದಲ್ಲಿ ವಾಸಿಸುವ ಸ್ನೇಹಿತರು ಹಾಗೂ ಸಂಬಂಧಿಕರಿಂದ ಪೋಸ್ಟ್​, ಕೊರಿಯರ್​ ಅಥವಾ ಇ ಕಾಮರ್ಸ್ ಮೂಲಕ ಉಡುಗೊರೆ ರೂಪದಲ್ಲಿ ಪಡೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...