ದೆಹಲಿ ಸರ್ಕಾರ ಜಾರಿಗೆ ತಂದ ಎಲೆಕ್ಟ್ರಿಕ್ ವಾಹನ ಪಾಲಿಸಿ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 3000 ಎಲೆಕ್ಟ್ರಿಕ್ ಕಾರುಗಳು ನೋಂದಣಿಯಾಗಿವೆ. ದೆಹಲಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯ ನಿಯಂತ್ರಣ ಮಾಡಲು ಇದು ಮಹತ್ವದ ಹೆಜ್ಜೆಯಾಗಿದೆ.
ಎಲೆಕ್ಟ್ರಿಕ್ ವಾಹನ ಪಾಲಿಸಿ ಬಳಿಕ 3000 ವಾಹನಗಳನ್ನ ನೋಂದಣಿ ಮಾಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ದೆಹಲಿ ಪಾತ್ರವಾಗಿದೆ. ಅಲ್ಲದೇ ವಾಯು ಮಾಲಿನ್ಯ ತಡೆಗಾಗಿ ಪೆಟ್ರೋಲ್, ಡಿಸೇಲ್ ವಾಹನಗಳನ್ನ ಬದಿಯಿಟ್ಟು ಅತಿ ಹೆಚ್ಚು ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ರಸ್ತೆಗಿಳಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹೊಸ ಪಾಲಿಸಿ ಅನ್ವಯ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡುವವರಿಗೆ ದೆಹಲಿ ಸರ್ಕಾರ ವಿಶೇಷ ಸಬ್ಸಿಡಿ ನೀಡುವುದಾಗಿ ಹೇಳಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡೋದಾಗಿ ಹೇಳಿತ್ತು. ಅಲ್ಲದೇ ಇ – ವಾಹನಗಳನ್ನ ಉತ್ತೇಜಿಸುವ ಸಲುವಾಗಿ ಪ್ರತಿ 3 ಕಿಲೋಮೀಟರ್ಗೆ ಒಂದರಂತೆ ಹೊಸ ಚಾರ್ಜಿಂಗ್ ಕೇಂದ್ರಗಳನ್ನ ದೆಹಲಿಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.