ನವದೆಹಲಿ: ಫೆಬ್ರವರಿ 2020 ರಿಂದ ಈ ತಿಂಗಳವರೆಗೆ ರೈತರಿಗೆ 3.26 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗಿದೆ.
ಇಂದು ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ, ಈ ತಿಂಗಳವರೆಗೆ 3 ಕೋಟಿ 70 ಲಕ್ಷ ರೂ. ಮಂಜೂರಾದ ಮಿತಿಯೊಂದಿಗೆ 3 26 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು (ಕೆಸಿಸಿ) ನೀಡಲಾಗಿದೆ. ಪಿಎಂ-ಕಿಸಾನ್ ಫಲಾನುಭವಿಗಳಿಗೆ ರಿಯಾಯಿತಿ ಸಾಲವನ್ನು ಒದಗಿಸಲು ಸುಮಾರು 2.5 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಸರ್ಕಾರ ವಿಶೇಷ ಸ್ಯಾಚುರೇಶನ್ ಡ್ರೈವ್ ಕೈಗೊಂಡಿದೆ ಎಂದರು.
ದೇಶಾದ್ಯಂತ ರೈತರ ಅನುಕೂಲಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದ ಸಚಿವರು, ಅಧಿಸೂಚಿತ ಪ್ರದೇಶಗಳಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲಾ ಗೇಣಿದಾರ ರೈತರು ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ರಕ್ಷಣೆಗೆ ಅರ್ಹರಾಗಿದ್ದಾರೆ. ಪಿಎಂಎಫ್‌ಬಿವೈ ಅಡಿಯಲ್ಲಿ ಗೇಣಿದಾರ ರೈತರಿಂದ ಸುಮಾರು 25 ಲಕ್ಷ 37 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.