ಕೊರೊನಾ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಎದುರಿಸಲು ಲಾಕ್ ಡೌನ್ ಜಾರಿಯಾಗಿತ್ತು. ದೇಶದಲ್ಲಿ ಮಾರ್ಚ್ 25, 2021 ರಿಂದ ಲಾಕ್ ಡೌನ್ ಜಾರಿಗೆ ಬಂದಿತ್ತು. ಲಾಕ್ ಡೌನ್ ಇಡೀ ದೇಶದ ಆರ್ಥಿಕತೆಗೆ ಹೊಡೆತ ನೀಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆ ಸಂಪೂರ್ಣ ಬಂದ್ ಆಗಿದ್ದ ಕಾರಣ ದೇಶದ ಅನೇಕ ಕಂಪನಿಗಳು ಸಂಕಷ್ಟ ಎದುರಿಸುತ್ತಿವೆ.
ದೇಶದ ಒಟ್ಟು 283 ಕಂಪನಿಗಳನ್ನು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ದಿವಾಳಿಯೆಂದು ಘೋಷಿಸಿದೆ. ಲೋಕಸಭೆಯ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕಾರ್ಪೊರೇಟ್ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಈ ವಿಷ್ಯ ತಿಳಿಸಿದ್ದಾರೆ.
ಏಪ್ರಿಲ್ 1, 2020 ರಿಂದ ಡಿಸೆಂಬರ್ 31, 2020 ರ ಅವಧಿಯಲ್ಲಿ ಒಟ್ಟು 76 ಕಾರ್ಪೊರೇಟ್ ಕಂಪನಿಗಳ ದಿವಾಳಿ ಪರಿಹಾರ ಪ್ರಕ್ರಿಯೆ ಪೂರ್ಣಗೊಂಡಿದೆ. ಬೇರೆ ಬೇರೆ ಕಾರಣಕ್ಕೆ 128 ಸಿಐಆರ್ಪಿಗಳನ್ನು ಮುಚ್ಚಲಾಗಿದೆ. 189 ಕಂಪನಿಗಳು ದಿವಾಳಿಯಾಗಿವೆ ಎಂದವರು ಹೇಳಿದ್ದಾರೆ. ದಿವಾಳಿ ಪ್ರಕ್ರಿಯೆಯ ಭಾಗವಾಗಿ ಮಾರ್ಚ್ 25 ರ ಮೊದಲು ಸಾಲ ಪಾವತಿ ಮಾಡದ ಕಂಪನಿಗಳ ವಿರುದ್ಧ ಕ್ರಮ ಮುಂದುವರಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.