ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ವಿಪ್ರೋ ಡಿಸೆಂಬರ್ 1ರಿಂದ ತನ್ನ 80 ಪ್ರತಿಶತದಷ್ಟು ಸಿಬ್ಬಂದಿಗೆ ಸಂಬಳ ಏರಿಕೆ ಹಾಗೂ ಹುದ್ದೆ ಬಡ್ತಿ ನೀಡಲಿದೆ. ಬಿ 3 ಹಾಗೂ ಅದಕ್ಕಿಂತ ಕೆಳಹಂತದ ಸಿಬ್ಬಂದಿಗೆ ಒಂದಂಕಿ ಸಂಬಳ ಏರಿಕೆಯಾಗಲಿದೆ.
ಅಲ್ಲದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಸಿಬ್ಬಂದಿಗೆ ಸಂಬಳ ಬಡ್ತಿ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಅಂತಾ ಕಂಪನಿ ಹೇಳಿದೆ. ವಿಪ್ರೋದಲ್ಲಿ 2021ರ ಜನವರಿವರೆಗೂ ವರ್ಕ್ ಫ್ರಮ್ ಹೋಂ ಮುಂದುವರಿಯಲಿದೆ.
ಭಾರತದ ನಾಲ್ಕನೇ ಪ್ರಮುಖ ಐಟಿ ಕಂಪನಿಯಾಗಿರುವ ವಿಪ್ರೋದಲ್ಲಿ 1.85 ಲಕ್ಷ ಮಂದಿ ನೌಕರರು ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ತಜ್ಞರ ಪ್ರಕಾರ ವಿಪ್ರೋ ವಾರ್ಷಿಕ ನಿವ್ವಳ ಲಾಭದಲ್ಲಿ 3.4 ಶೇಕಡಾ ನಷ್ಟವನ್ನ ಅನುಭವಿಸಿದೆ. ಆದರೂ ಕೂಡ ತನ್ನ ಸಿಬ್ಬಂದಿಗೆ ಸಂಬಳ ಏರಿಕೆ ಮಾಡಲು ವಿಪ್ರೋ ನಿರ್ಧರಿಸಿದೆ.