ಆಧಾರ್ ಕಾರ್ಡ್ ಈಗ ಎಲ್ಲ ಸೇವೆಗಳಿಗೂ ಪ್ರಮುಖ ದಾಖಲೆಯಾಗಿದೆ. ಇದಿಲ್ಲದೆ ಯಾವುದೇ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ. ಯುಐಡಿಎಐ ಆಗಾಗ ಆಧಾರ್ ಕಾರ್ಡ್ ನವೀಕರಣ ಮಾಡ್ತಿದೆ. ಈ ವರ್ಷ ಪಿವಿಸಿ ಆಧಾರ್ ಕಾರ್ಡ್ ತಂದಿದೆ. ಇದನ್ನು ಇಟ್ಟುಕೊಳ್ಳುವುದು ಸುಲಭ.
ಇಲ್ಲಿಯವರೆಗೆ ಆಧಾರ್ ಕಾರ್ಡನ್ನು ಕಾಗದದಲ್ಲಿ ಮುದ್ರಿಸಲಾಗುತ್ತಿತ್ತು. ಆದರೆ ಯುಐಡಿಎಐ ಆಧಾರ್ ಕಾರ್ಡ್‌ನ ಡಿಜಿಟಲ್ ರೂಪವನ್ನೂ ಅನುಮೋದಿಸಿದೆ. ಮೊಬೈಲ್‌ನಲ್ಲಿ ಈ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಅಗತ್ಯವಿದ್ದಾಗ ಅದನ್ನು ಬಳಸಬಹುದು.
ಪಿವಿಸಿ ಆಧಾರ್ ಕಾರ್ಡ್ ಇಟ್ಟುಕೊಳ್ಳುವುದು ತುಂಬಾ ಸುಲಭ. ಇದು ಪ್ಲಾಸ್ಟಿಕ್ ರೂಪದಲ್ಲಿರುತ್ತದೆ. ಅದರ ಗಾತ್ರ ಎಟಿಎಂ ಡೆಬಿಟ್ ಕಾರ್ಡ್‌ನಂತಿರುತ್ತದೆ. ಸುಲಭವಾಗಿ ಜೇಬಿನಲ್ಲಿ ಅಥವಾ ಕೈಚೀಲದಲ್ಲಿ ಇಟ್ಟುಕೊಳ್ಳಬಹುದು. ಪಿವಿಸಿ ಆಧಾರ್ ಕಾರ್ಡ್ ಗೆ 50 ರೂಪಾಯಿ ಶುಲ್ಕ ಪಾವತಿಸಬೇಕು.
ಪಿವಿಸಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ ಯುಐಡಿಎಐ ವೆಬ್‌ಸೈಟ್ uidai.gov.in ಅಥವಾ resident.uidai.gov.in ಗೆ ಹೋಗಬೇಕು. ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು. 50 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಆರ್ಡರ್ ಮಾಡಿದಲ್ಲಿ ಕೆಲವು ದಿನಗಳ ಅದು ನಿಮ್ಮ ಮನೆಗೆ ಬರುತ್ತದೆ.