ಒಪ್ಪೋ ಇಂಡಿಯಾದ ಹಣಕಾಸು ವ್ಯವಸ್ಥಾಪಕ ಮಹೇಂದ್ರ ಕುಮಾರ್ ರಾವತ್ ತೆರಿಗೆ ವಂಚನೆ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ.
CGST ಭಿವಂಡಿ, ಥಾಣೆ ಘಟಕವು Oppo Mobiles India Pvt Ltd. ನ ಹಣಕಾಸು ವ್ಯವಸ್ಥಾಪಕರನ್ನು ಬಂಧಿಸಿದೆ. ಅಸ್ತಿತ್ವದಲ್ಲಿಲ್ಲದ ಪೂರೈಕೆದಾರರಿಂದ ನಕಲಿ ಇನ್‌ವಾಯ್ಸ್‌ಗಳ ಮೇಲೆ 19 ಕೋಟಿ ರೂಪಾಯಿಗಳ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ವಂಚನೆಯಿಂದ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
CGST ಸಿಬ್ಬಂದಿ ಒಪ್ಪೋ ಕಚೇರಿಯ ಮೇಲೆ ದಾಳಿ ಮಾಡಿ ಮ್ಯಾನೇಜರ್ ಮಹೇಂದ್ರ ಕುಮಾರ್ ರಾವತ್ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಅವರನ್ನು ಏಪ್ರಿಲ್ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ರಮಗಳನ್ನು ಎಸಗಿದ್ದಕ್ಕೆ ಸಂಬಂಧಿಸಿದಂತೆ ರಾವತ್ ಅವರ ತಪ್ಪೊಪ್ಪಿಗೆಗಳ ಆಧಾರದ ಮೇಲೆ ಸಿಜಿಎಸ್‌ಟಿ ಕಾಯ್ದೆ, 2017 ಸೆಕ್ಷನ್ 69 ಮತ್ತು 132 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಗೇನ್ ಹೀರೋ ಇಂಡಿಯಾ ಪ್ರೈವೇಟ್‌ನಿಂದ ಯಾವುದೇ ಸರಕುಗಳನ್ನು ಪಡೆಯದೆಯೇ ಒಪ್ಪೋ ಮಹಾರಾಷ್ಟ್ರ ನಕಲಿ ಐಟಿಸಿಯನ್ನು ಪಡೆಯುವಲ್ಲಿ ತೊಡಗಿದೆ ಎಂದು ಸಿಜಿಎಸ್‌ಟಿ ಭಿವಂಡಿಯ ಆಂಟಿ-ಎವೆಶನ್ ವಿಂಗ್ ತನಿಖೆಯ ಸಮಯದಲ್ಲಿ ಗೊತ್ತಾಗಿದೆ. Oppo ಮೊಬೈಲ್ ಗಳನ್ನು ತಯಾರಿಸುವ ಜಾಗತಿಕ ದೈತ್ಯ ಕಂಪನಿಯು ಚೀನಾದ ಡೊಂಗ್ ಗುವಾನ್ ನಲ್ಲಿ ಪ್ರಧಾನ ಕಚೇರಿ ಹೊಂದಿದೆ.