
ತಿಂಗಳ ಕೊನೆಯಲ್ಲಿ ಬ್ಯಾಂಕ್ ಖಾತೆಯಲ್ಲಿನ ಅಷ್ಟೂ ಹಣ ಬಾಚಿಕೊಳ್ಳುವ ಅಭ್ಯಾಸ ನಿಮ್ಮದಾಗಿದೆಯೇ ? ಬ್ಯಾಂಕ್ ಸೂಚಿಸುವ ಕನಿಷ್ಠ ಹಣ ಕೂಡ ಇರಿಸಲು ಆಗುತ್ತಿಲ್ಲವೇ ? ಹಾಗಾದರೆ ಶೂನ್ಯ ಬ್ಯಾಲೆನ್ಸ್ ಖಾತೆಯೇ ನಿಮಗೆ ಸೂಕ್ತ. ಈ ಖಾತೆಗಳಿಗೆ ಬ್ಯಾಂಕ್ ಗಳು ಯಾವುದೇ ರೀತಿ ಬಡ್ಡಿ ಕೊಡಲ್ಲ. ಜತೆಗೆ ಬ್ಯಾಲೆನ್ಸ್ ನಿರ್ವಹಣೆಯ ಗೋಜು ಕೂಡ ಇರಲ್ಲ. ಹಾಗಾಗಿ ದಂಡವೂ ಹೇರಲಾಗಲ್ಲ.
ಆದರೂ, ಕೆಲವು ಬ್ಯಾಂಕ್ಗಳು ಮಾತ್ರ ವಿಶಾಲ ಹೃದಯಿಗಳಾಗಿ ಝೀರೊ ಬ್ಯಾಲೆನ್ಸ್ ಅಕೌಂಟ್ಗೂ ಉಳಿತಾಯ ಖಾತೆಗಳ ಮಾದರಿಯಲ್ಲಿ ವಾರ್ಷಿಕ ಬಡ್ಡಿ ಕೊಡುತ್ತಿವೆ. ಅದನ್ನು ಕೆಳಗಿನಂತೆ ತಿಳಿಯಿರಿ.
– ಐಡಿಎಫ್ಸಿ : ಪ್ರಥಮ್ ಸೇವಿಂಗ್ಸ್ ಖಾತೆ ಹೆಸರಿನಲ್ಲಿ ವಾರ್ಷಿಕ ಬಡ್ಡಿ 4%, ನಿತ್ಯ ಎಟಿಎಂ ವಿತ್ಡ್ರಾ ಮಿತಿಯು 40 ಸಾವಿರ ರೂ. ಇರಲಿದೆ.
ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ರೋಹಿತ್ ಗೆ ನಾಯಕತ್ವ: ಶೀಘ್ರದಲ್ಲೇ ಘೋಷಣೆ
– ಎಸ್ಬಿಐ : ಝೀರೊ ಬ್ಯಾಲೆನ್ಸ್ ಖಾತೆಗೆ ’ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್ (ಬಿಎಸ್ಬಿಡಿಎ)’ ಎಂದು ಹೆಸರು. ಇದರ ಮೇಲೆ ಬಡ್ಡಿ ದರವು 2.70% ಇದೆ.
– ಯೆಸ್ ಬ್ಯಾಂಕ್ : ಸ್ಮಾರ್ಟ್ ಸ್ಯಾಲರಿ ಅಡ್ವಾಂಟೆಜ್ ಖಾತೆ ಹೆಸರಲ್ಲಿ 4% ಬಡ್ಡಿ ನೀಡಲಾಗುತ್ತದೆ. ಡೆಬಿಟ್ ಕಾರ್ಡ್ ವಿತ್ ಡ್ರಾ ಮಿತಿಯು 75 ಸಾವಿರ ರೂ.
– ಎಚ್ಡಿಎಫ್ಸಿ : ಶೂನ್ಯ ಬ್ಯಾಲೆನ್ಸ್ ಖಾತೆಯ ಬಡ್ಡಿ ದರವು 3% ಮಾತ್ರ.
– ಕೊಟಕ್ ಮಹೀಂದ್ರಾ ಬ್ಯಾಂಕ್ : 811 ಡಿಜಿಟಲ್ ಬ್ಯಾಂಕ್ ಅಕೌಂಟ್ ಹೆಸರಿನಲ್ಲಿ ಝೀರೊ ಬ್ಯಾಲೆನ್ಸ್ ಖಾತೆ ನೀಡಲಾಗುತ್ತದೆ. ಬಡ್ಡಿ ದರವು ಶೇ. 3.50ರಷ್ಟಿದೆ.