ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಅಧಿಕಾರವಧಿಯಲ್ಲೇ ಜನ್ ಧನ್ ಯೋಜನೆಯನ್ನು ಪರಿಚಯಿಸಿದ್ದಾರೆ. ದೇಶದ ಜನರಿಗೆ ಜನ್ ಧನ್ ಖಾತೆ ತೆರೆಯಲು ಅವಕಾಶ ನೀಡಲಾಗಿದೆ. ಜನರ ಜೀವನ ಮಟ್ಟವನ್ನು ಸುಧಾರಿಸಲು ನರೇಂದ್ರ ಮೋದಿ ಸರ್ಕಾರ ಈ ಯೋಜನೆಯನ್ನು ಶುರು ಮಾಡಿದೆ. ಈ ಯೋಜನೆಯಲ್ಲಿ ಸಾಕಷ್ಟು ಲಾಭವಿದ್ದು, ಆದ್ರೆ ಇದ್ರ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ.
ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ ಖಾತೆ ತೆರೆದ ಪ್ರತಿ ಖಾತೆದಾರರಿಗೆ ಒಟ್ಟು 1.30 ಲಕ್ಷ ರೂಪಾಯಿಗಳ ಲಾಭ ಸಿಗುತ್ತದೆ. ಇದು ಅಪಘಾತ ವಿಮೆಯನ್ನೂ ಒಳಗೊಂಡಿದೆ. ಒಂದು ಲಕ್ಷ ಅಪಘಾತ ವಿಮೆ ಮತ್ತು 30,000 ರೂಪಾಯಿ ಸಾಮಾನ್ಯ ವಿಮೆಯನ್ನು ಖಾತೆದಾರರಿಗೆ ನೀಡಲಾಗುತ್ತದೆ.
ಖಾತೆದಾರ ಅಪಘಾತಕ್ಕೊಳಗಾದಾಗ 30,000 ರೂಪಾಯಿ ನೀಡಲಾಗುತ್ತದೆ. ಅಪಘಾತದಲ್ಲಿ ಸಾವನ್ನಪ್ಪಿದಾಗ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಶೂನ್ಯ ಬ್ಯಾಲೆನ್ಸ್ ಸೌಲಭ್ಯ ಹೊಂದಿರುವ ಈ ವಿಶೇಷ ಖಾತೆಯನ್ನು ನಿಮ್ಮ ಮನೆಯ ಸಮೀಪವಿರುವ ಯಾವುದೇ ಶಾಖೆಯಲ್ಲಿ ತೆರೆಯಬಹುದು.