alex Certify ಬಿಗ್ ನ್ಯೂಸ್: ಸಾಲ ಪಾವತಿಗೆ ವಿನಾಯಿತಿ, ‘RBI’ ನಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಸಾಲ ಪಾವತಿಗೆ ವಿನಾಯಿತಿ, ‘RBI’ ನಿಂದ ಮಹತ್ವದ ಮಾಹಿತಿ

ನವದೆಹಲಿ: ಕೊರೋನಾ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಾಲ ಮರುಪಾವತಿಸಲು ವಿನಾಯಿತಿ ನೀಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಮಹತ್ವದ ಸುತ್ತೋಲೆ ಹೊರಡಿಸಿದೆ.

ಮಾರ್ಚ್​ 1 ರವರೆಗೆ ಯಾರು ನಿಗದಿತ ಸಮಯಕ್ಕೆ ಬಡ್ಡಿ ಕಟ್ಟಿರುತ್ತಿರೋ ಅಂತಹ ಗ್ರಾಹಕರು ಮೊರಟೋರಿಯಂಗೆ ಸಂಪೂರ್ಣವಾಗಿ ಅರ್ಹರು ಎಂದು ಹೇಳಿದೆ. 6 ಆಗಸ್ಟ್​ವರೆಗೆ ನೀಡಲಾಗಿರೋ ಇಎಂಐ ವಿನಾಯಿತಿ ಕುರಿತಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಆರ್​ಬಿಐ, ಮಾರ್ಚ್ 1 ರವರೆಗೆ ಯಾವುದೇ ಅಡಚಣೆಗಳಿಲ್ಲದೇ ಪ್ರಮಾಣಿತವಾಗಿ ಉಳಿದಿರುವ ಸಾಲಗಳು ಮಾತ್ರ ಈ ವಿನಾಯತಿಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ಆಗಸ್ಟ್ ​8 ರ ಸುತ್ತೋಲೆಗೆ ಸಂಬಧಿಸಿದಂತೆ ಸಾಲಗಾರರನ್ನ ವರ್ಗೀಕರಣ ಮಾಡುವಂತೆ ಆರ್​ಬಿಐ ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ. ಇದರನ್ವಯ ಪ್ರಮಾಣಿತ ಎಂದು ವರ್ಗೀಕರಿಸಲ್ಪಟ್ಟ ಅರ್ಹ ಸಾಲಗಾರರು ಮಾತ್ರ ಈ ಸೌಲಭ್ಯಕ್ಕೆ ಭಾಜನರಾಗಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...