alex Certify ಕೊರೊನಾ ಕಾಲದಲ್ಲೂ ಆನ್‌ ಲೈನ್‌ ಮಾರುಕಟ್ಟೆಗೆ ಬಂಪರ್‌ ಬ್ಯುಸಿನೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲೂ ಆನ್‌ ಲೈನ್‌ ಮಾರುಕಟ್ಟೆಗೆ ಬಂಪರ್‌ ಬ್ಯುಸಿನೆಸ್

ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್​ ಆನ್​ಲೈನ್​ ಮಾರ್ಕೆಟ್​ಗಳು ಗ್ರಾಹಕರಿಗೆ ಹಬ್ಬದ ಆಫರ್​ಗಳನ್ನ ನೀಡೋಕೆ ತಯಾರಿ ನಡೆಸಿವೆ. ಈಗಾಗಲೇ ಗ್ರಾಹಕರನ್ನ ಸೆಳೆಯಲು ಸಾಕಷ್ಟು ಪ್ರಯತ್ನವನ್ನೂ ಪಡ್ತಿವೆ. ಆದರೆ ಯಾವುದೇ ಆಫರ್​​ಗಳನ್ನೂ ನೀಡೋಕೂ ಮುಂಚೆಯೇ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮೊಬೈಲ್​ಗಳು ಈ ವರ್ಷ ಖರೀದಿಯಾಗಿವೆಯಂತೆ.

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್ ಸಾಕಷ್ಟು ನಷ್ಟ ಅನುಭವಿಸಿತ್ತು. ಆದರೆ ಈ ಬಾರಿ ಹಿಂದೆಂದೂ ಮಾರಾಟವಾದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್​ ಫೋನ್​ಗಳು ಬಿಕರಿಯಾಗಿವೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಫ್ಲಿಪ್​ಕಾರ್ಟ್ ಮೊಬೈಲ್​ ವಿಭಾಗದ ಹಿರಿಯ ನಿರ್ದೇಶಕಿ ಆದಿತ್ಯ ಸೋನಿ, ಕಳೆದ ಆರು ತಿಂಗಳಲ್ಲಿ ನಾವು ಆಹ್ಲಾದಕರ ಬೆಳವಣಿಗೆಯನ್ನ ಕಂಡಿದ್ದೇವೆ. ಮೊಬೈಲ್​ ಮಾರಾಟದಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡಿದ್ದೇವೆ ಅಂತಾ ಬೆಂಗಳೂರು ಮೂಲದ ಕಂಪನಿಯೊಂದು ಹೇಳಿಕೊಂಡಿದೆ ಅಂತಾ ಹೇಳಿದ್ರು.

ಅಮೆಜಾನ್​ ಮಾರುಕಟ್ಟೆಯಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ಈ ವಿಚಾರವಾಗಿ ಮಾತನಾಡಿದ ಅಮೆಜಾನ್​ ವಕ್ತಾರ ಗ್ರಾಹಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...