ಮಾಜಿ ಸೈನಿಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಈ ಹಿಂದೆ ಮಾಜಿ ಸೈನಿಕರು ಅಥವಾ ಅವರ ಮನೆಯವರು ಪಿಂಚಣಿ ಪಡೆಯುವುದು ಕಷ್ಟವಾಗುತ್ತಿತ್ತು. ಈಗ ನೀವು ಪಿಂಚಣಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರಿಗೆ ಸರ್ಕಾರ ನೆರವಾಗ್ತಿದೆ. ಕೇಂದ್ರ ಸರ್ಕಾರ ಇವರಿಗಾಗಿ ವಿಶೇಷ ಆನ್‌ಲೈನ್ ಪೋರ್ಟಲ್ ಸಿದ್ಧಪಡಿಸಿದೆ.
ಪಿಂಚಣಿಗಾಗಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಆನ್ಲೈನ್ ನಲ್ಲಿಯೇ ಎಲ್ಲ ಕೆಲಸ ನಡೆಯುತ್ತದೆ. ದೂರನ್ನು ಈ ಪೋರ್ಟಲ್ ಮೂಲಕ ಸುಲಭವಾಗಿ ಸಲ್ಲಿಸಬಹುದು. ಇದಕ್ಕೆ ಡಿಫೆನ್ಸ್ ಪಿಂಚಣಿ ಕುಂದುಕೊರತೆ ಪರಿಹಾರ ಪೋರ್ಟಲ್ ಎಂದು ನಾಮಕರಣ ಮಾಡಲಾಗಿದೆ. ಇದರ ಮೂಲಕ ಮಾಜಿ ಸೈನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ https://rakshapension.desw.gov.in ಮಾಜಿ ಸೈನಿಕರ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದು.
ನಿವೃತ್ತ ಸೈನಿಕರ ಅಥವಾ ಹುತಾತ್ಮ ಯೋಧರ ಕುಟುಂಬದವರಿಗೆ ಪಿಂಚಣಿ ಸರಿಯಾಗಿ ಸಿಗುವಂತೆ ಮಾಡುವುದು ಹಾಗೂ ಇದಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ನಿವಾರಿಸುವುದು ಈ ಪೋರ್ಟಲ್‌ನ ಉದ್ದೇಶವಾಗಿದೆ. ಯಾವುದೇ ಮಾಜಿ ಸೈನಿಕರು ತಮ್ಮ ದೂರುಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಇದಕ್ಕಾಗಿ ಮಾಜಿ ಸೈನಿಕರು ಪಿಂಚಣಿಗೆ ಅರ್ಜಿ ಅಥವಾ ದೂರು ಸಲ್ಲಿಸುವುದಾದರೆ ಇದಕ್ಕೂ ಮೊದಲು ಹೆಸರು ಹಾಗೂ ಕೇಳಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ಈ ಪೋರ್ಟಲ್‌ನಲ್ಲಿ ನೋಂದಾಯಿಸಬೇಕಾಗುತ್ತದೆ.
ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಮೂದಿಸಿ ನಂತರ, ಇಮೇಲ್-ಐಡಿ ಅನ್ನು ನೋಂದಾಯಿಸಬೇಕು. ನಂತರ ದೂರಿಗೆ ಸಂಬಂಧಿಸಿದ ಮಾಹಿತಿ ನೀಡಬೇಕು.