ಆನ್ಲೈನ್ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು ಹಾಗೂ ಆಡಿಯೋ ದೃಶ್ಯ ಕಾರ್ಯಕ್ರಮಗಳು ಮತ್ತು ಆನ್ಲೈನ್ ಸುದ್ದಿ – ಪ್ರಸಕ್ತ ವ್ಯವಹಾರಗಳ ವಿಷಯಗಳ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಇದರ ಅನ್ವಯ ಓಟಿಟಿ ಫ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ನ್ಯೂಸ್ ಪೋರ್ಟಲ್ ಸೇರಿದಂತೆ ಇತರೆ ಡಿಜಿಟಲ್ ವಿಷಯ ಪೂರೈಕೆದಾರರು ಇನ್ಮುಂದೆ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನದ ವ್ಯಾಪ್ತಿಗೆ ಬರಲಿದ್ದಾರೆ,
ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುವ ಚಲನ ಚಿತ್ರಗಳು ಹಾಗೂ ಕಾರ್ಯಕ್ರಮಗಳು ಇನ್ಮುಂದೆ ಭಾರತ ವ್ಯವಹಾರ ಹಂಚಿಕೆ ನಿಯಮ 1961ರ ಅಡಿಯಲ್ಲಿ ಬರಲಿದೆ.
ಓಟಿಟಿ ಫ್ಲಾಟ್ಫಾರ್ಮ್ಗಳ ಮೇಲೆ ನಿಗಾ ಇಡಬೇಕು ಎಂದು ಸುಪ್ರೀಂಕೋರ್ಟ್ಗೆ ಸ್ವಾಯತ್ತ ಸಂಸ್ಥೆ ಸಲ್ಲಿಸಿದ್ದ ಪಿಐಎಲ್ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಬಳಿಕ ಪ್ರತಿಕ್ರಿಯೆ ಕೇಳಿದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ.
ಮುಖ್ಯ ನ್ಯಾ. ಎಸ್.ಎ. ಬೋಬ್ಡೆ ಹಾಗೂ ಎಸ್.ಎಸ್ ಬೋಪಣ್ಣ. ವಿ. ರಾಮಸುಬ್ರಮಣಿಯನ್ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಇಂಟರ್ನೆಟ್, ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ ನೋಟಿಸ್ ನೀಡಿತ್ತು.