ನವದೆಹಲಿ: ಆನ್ ಲೈನ್ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೊಗಳು, ಜೂಜು, ಕುದುರೆ ರೇಸಿಂಗ್ ಮತ್ತು ಲಾಟರಿಗೆ ಶೇಕಡ 28 ರಷ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಇಂದಿನಿಂದ ಜಾರಿಗೆ ಬಂದಿದೆ.
ಗೆಜೆಟ್ ಅಧಿಸೂಚನೆಯಲ್ಲಿ, ಹಣಕಾಸು ಸಚಿವಾಲಯವು ತಿದ್ದುಪಡಿ ಮಾಡಿದ ಜಿಎಸ್‌ಟಿ ನಿಬಂಧನೆಯು ಇಂದಿನಿಂದ ಜಾರಿಗೆ ಬಂದಿದೆ. ಈ ವರ್ಷದ ಆಗಸ್ಟ್ ನಲ್ಲಿ ನವದೆಹಲಿಯಲ್ಲಿ ನಡೆದ 51 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೊಗಳು, ಜೂಜು, ಕುದುರೆ ರೇಸಿಂಗ್ ಮತ್ತು ಲಾಟರಿಗೆ ಶೇ. 28 ರಷ್ಟು ಜಿಎಸ್‌ಟಿ ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.