ಚೆನ್ನೈ: ತಮಿಳುನಾಡು ಸರ್ಕಾರ ಆನ್ಲೈನ್ ಮೂಲಕ ನಡೆಯುವ ಜೂಜು ನಿಯಂತ್ರಣಕ್ಕೆ ಕಠಿಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ.
ಪ್ರಸಕ್ತ ಅಧಿವೇಶನದಲ್ಲೇ ಕಠಿಣ ಕಾಯ್ದೆ ಜಾರಿಗೆ ಮಸೂದೆ ಮಂಡಿಸಲಾಗಿದೆ. ಪೋಕರ್, ಆನ್ಲೈನ್ ರಮ್ಮಿ ಮೊದಲಾದ ಜೂಜಾಟ ಆಡುವವರಿಗೆ, ಆಡಿಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಇದೆ. ವೆಬ್ಸೈಟ್, ಕಂಪ್ಯೂಟರ್, ಆಪ್ ಯಾವುದೇ ರೀತಿಯ ಬೆಟ್ಟಿಂಗ್ ನಲ್ಲಿ ತೊಡಗಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಲಾಗಿದೆ.