ಸದ್ಯವೇ ಈರುಳ್ಳಿ ದೋಸೆಯಲ್ಲಿ ಈರುಳ್ಳಿ ಕಾಣಸಿಗದಿರಬಹುದು. ಯಾಕೆಂದ್ರೆ ಪೆಟ್ರೋಲ್ – ಡಿಸೇಲ್ ಬೆಲೆಯಂತೆ ಈರುಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬರ್ತಿದೆ. ಕಳೆದ ಕೆಲ ವಾರಗಳಲ್ಲಿ ಈರುಳ್ಳಿ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ವರ್ಷದ ಆರಂಭದಲ್ಲಿ ಕೆ.ಜಿ.ಗೆ 25-30 ರೂಪಾಯಿಯಿದ್ದ ಈರುಳ್ಳಿ ಬೆಲೆ ಈಗ 65ರಿಂದ 75 ರೂಪಾಯಿಯಾಗಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆ ಮಹಾರಾಷ್ಟ್ರದಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಹಾಳು ಮಾಡಿದೆ. ಇದು ಈರುಳ್ಳಿ ಕೊರತೆಗೆ ಕಾರಣವಾಗಿದೆ. ಈರುಳ್ಳಿ ಕೊರತೆಯಿಂದಾಗಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗ್ತಿರುವುದು ಕೂಡ ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ.
ದಕ್ಷಿಣ ಭಾರತದಲ್ಲಿ ಈರುಳ್ಳಿ ಸರಬರಾಜಿನಲ್ಲಿ ಕುಸಿತವಾಗಿದೆ. ಹಾಗೆ ಗುಜರಾತ್ ಹಾಗೂ ಮಧ್ಯಪ್ರದೇಶದಿಂದಲೂ ಈರುಳ್ಳಿ ಬೇಡಿಕೆಗೆ ತಕ್ಕಷ್ಟು ಮಾರುಕಟ್ಟೆಗೆ ಬರ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಸದ್ಯ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮಾರ್ಚ್ ನಂತ್ರ ಹೊಸ ಬೆಳೆ ಬರಲಿದ್ದು, ಬೆಲೆ ಇಳಿಕೆ ನಿರೀಕ್ಷಿಸಬಹುದೆಂದು ತಜ್ಞರು ಹೇಳಿದ್ದಾರೆ.