ಬೆಂಗಳೂರು: ನಿರಂತರವಾಗಿ ಸುರಿದ ಮಳೆ ಮತ್ತು ರೋಗಬಾಧೆಯಿಂದ ಈರುಳ್ಳಿ ಬೆಳೆ ನಾಶವಾಗತೊಡಗಿದ್ದು ಪೂರೈಕೆ ಇಳಿಕೆಯಾಗುವುದರಿಂದ ಈರುಳ್ಳಿ ದರ ಏರಿಕೆಯಾಗುವ ಸಾಧ್ಯತೆಯಿದೆ.
ಭಾರಿ ಮಳೆ ಮತ್ತು ರೋಗಬಾಧೆ ಕಾರಣ ಈರುಳ್ಳಿ ಬೆಳೆ ಹಾಳಾಗತೊಡಗಿದ್ದು ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಇದರಿಂದಾಗಿ ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಭಾರೀ ಮಳೆಯ ಕಾರಣ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಹೆಚ್ಚಿನ ಪ್ರಮಾಣದ ಈರುಳ್ಳಿ ಕೊಳೆಯತೊಡಗಿದೆ. ನವಂಬರ್ ವೇಳೆಗೆ ಹೊಸ ಬೆಳೆ ಬರಲಿದೆ.
ಆದರೆ, ಭಾರೀ ಮಳೆಯ ಕಾರಣ ಬೆಳೆ ಪೂರ್ಣಪ್ರಮಾಣದಲ್ಲಿ ಬರುವ ಸಾಧ್ಯತೆ ಇಲ್ಲ. ಇದರಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೆಜಿ ಈರುಳ್ಳಿ 50 ರಿಂದ 60 ರೂಪಾಯಿವರೆಗೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.