ನವದೆಹಲಿ: ಏರು ಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ಬೆಲೆ ಶೀಘ್ರವೇ ಶತಕ ಬಾರಿಸಲಿದೆ. ದೆಹಲಿ, ಬೆಂಗಳೂರಿನಲ್ಲಿ ಕೆಜಿಗೆ 70 ರಿಂದ 80 ರೂ.ಗೆ ಈರುಳ್ಳಿ ದರ ತಲುಪಿದ್ದು, ಶೀಘ್ರವೇ 100 ರೂಪಾಯಿ ಸನಿಹಕ್ಕೆ ತಲುಪುವ ಸಾಧ್ಯತೆ ಇದೆ.
ಕಳೆದ ವಾರ ಕೆಜೆಗೆ 30 ರಿಂದ 50 ವರೆಗೆ ಇದ್ದ ಈರುಳ್ಳಿ ದರ ಈಗ 70 ರಿಂದ 80 ರೂ.ಗೆ ತಲುಪಿದೆ. ನವೆಂಬರ್ ಮೊದಲ ವಾರದ ವೇಳೆಗೆ 100 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಉತ್ಪಾದನೆ ಕುಂಠಿತ, ಪೂರೈಕೆ ಕೊರತೆಯ ಕಾರಣ ಈರುಳ್ಳಿ ದರ ಏರಿಕೆ ಕಾಣುತ್ತಿದೆ.
ದೆಹಲಿ, ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಗುರುಗ್ರಾಮ, ಫರೀದಾಬಾದ್ ಮೊದಲಾದ ಕಡೆಗಳಲ್ಲಿ 15 ದಿನಗಳ ಹಿಂದೆ 40 ರೂ. ಇದ್ದ ಕೆಜಿ ಈರುಳ್ಳಿ ದರ ಈಗ 60 ರೂ.ಗಿಂತಲೂ ಹೆಚ್ಚಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ಬಾರಿ ಮಳೆ ಕೊರತೆಯ ಕಾರಣ ಬೆಳೆ ಕಡಿಮೆಯಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ದರ ಏರಿಕೆಯಾಗಿದೆ.