ಬೆಂಗಳೂರು: ಏರುಗತಿಯಲ್ಲಿ ಸಾಗುತ್ತಿದ್ದ ಈರುಳ್ಳಿ ದರ ಕಡಿಮೆಯಾಗತೊಡಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 30 ರೂ. ದರ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರೂ.ಗೆ ಇಳಿದಿದೆ.
ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಹೋಟೆಲ್ ಮಾಲೀಕರು, ಗ್ರಾಹಕರಿಗೆ ಅನುಕೂಲವಾದಂತಾಗಿದೆ. ಕಳೆದ ಮೂರು ತಿಂಗಳಿಂದ ಈರುಳ್ಳಿ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಗುಣಮಟ್ಟದ ಈರುಳ್ಳಿ ಕೂಡ ಪೂರೈಕೆಯಾಗುತ್ತಿರಲಿಲ್ಲ.
ಈಗ ಗುಣಮಟ್ಟದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಕಡಿಮೆಯಾಗ್ತಿದೆ. ಕೆಜಿಗೆ 25 ರೂಪಾಯಿವರೆಗೂ ಕಡಿಮೆಯಾಗಬಹುದು ಎಂದು ಹೇಳಲಾಗಿದೆ.