ಬೆಂಗಳೂರು: ಶತಕದ ಸಮೀಪಕ್ಕೆ ತಲುಪಿದ್ದ ಈರುಳ್ಳಿ ದರ ಭಾರಿ ಇಳಿಕೆ ಕಂಡಿದೆ. ತಿಂಗಳ ಹಿಂದೆ 80 ರೂಪಾಯಿ ಇದ್ದ ಈರುಳ್ಳಿ 35 ರೂಪಾಯಿಗೆ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟಿಸಿರುಬಿಟ್ಟಿದ್ದಾರೆ. ಆದರೆ, ಬೆಲೆ ಇಳಿಕೆಯಾಗಿರುವುದು ರೈತರಿಗೆ ಆತಂಕ ತಂದಿದೆ.
ರಫ್ತು ನಿರ್ಬಂಧ, ಮಾರುಕಟ್ಟೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವ ಕಾರಣ ಬೆಲೆ ಕುಸಿತ ಆಗಿದೆ. ಶೀಘ್ರದಲ್ಲೇ ಹಿಂಗಾರು ಹಂಗಾಮಿನ ಬೆಳೆ ಕೂಡ ಮಾರುಕಟ್ಟೆಗೆ ಬರಲಿದ್ದು ಇನ್ನೂ ಬೆಲೆ ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ.
ಕಳೆದ ಒಂದು ತಿಂಗಳ ಹಿಂದೆ ಒಂದು ಕೆಜಿಗೆ 80 ರೂಪಾಯಿಯಾಗಿದ್ದ ಈರುಳ್ಳಿ ಈಗ 100 ರೂಪಾಯಿಗೆ 3 ರಿಂದ 4 ಕೆಜಿಯಂತೆ ಮಾರಾಟ ಮಾಡಲಾಗುತ್ತಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಸಗಟು ಮಾರಾಟ ದರ ಕನಿಷ್ಠ 800 ರೂ.ನಿಂದ ಗರಿಷ್ಠ 300 ರೂಪಾಯಿವರೆಗೆ ಇದೆ. ಮಾಲ್ ಗಳಲ್ಲಿ ಕೆಜಿ ಈರುಳ್ಳಿ ದರ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ.