ಹುಬ್ಬಳ್ಳಿ: ತಿಂಗಳ ಹಿಂದೆಯಷ್ಟೇ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ದರ ಈಗ ಕುಸಿತ ಕಾಣುತ್ತಿದ್ದು, ರೈತರಿಗೆ ಕಣ್ಣೀರು ತರಿಸುತ್ತಿದೆ.
ಸೆಪ್ಟೆಂಬರ್ ನಲ್ಲಿ ಸ್ಥಳೀಯ ಈರುಳ್ಳಿ ದರ ಕ್ವಿಂಟಲ್ ಗೆ 2400 ರೂ. ಇತ್ತು. ಅಕ್ಟೋಬರ್ ನಲ್ಲಿ ಕ್ವಿಂಟಲ್ ಗೆ ಗರಿಷ್ಠ 6,500 ರೂ.ಗೆ ಹೆಚ್ಚಳವಾಗಿತ್ತು. ಒಂದೇ ತಿಂಗಳಲ್ಲಿ ಕ್ವಿಂಟಲ್ ಗೆ 4,100 ರೂ. ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಿತ್ತು. ಕೆಜಿ ಈರುಳ್ಳಿ ದರ 80 ರೂ.ವರೆಗೆ ಮಾರಾಟವಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು.
ಈಗ ಈರುಳ್ಳಿ ದರ ಕುಸಿತ ಕಾಣುತ್ತಿದೆ. ಕ್ವಿಂಟಲ್ ಈರುಳ್ಳಿ ದರ 4000 -4100 ರೂ.ಗೆ ಮಾರಾಟವಾಗುತ್ತಿದೆ. ದರ ಕುಸಿತದಿಂದ ಬೆಳೆಗಾರರಿಗೆ ಕಣ್ಣೀರು ತರಿಸುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿಯೂ ದರ ಕಡಿಮೆಯಾಗಿ ಗ್ರಾಹಕರಿಗೆ ಅನುಕೂಲವಾಗಿದೆ.