ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಸುಂಕ ಕಡಿತಗೊಳಿಸಿದೆ. ಇದರೊಂದಿಗೆ ದುಬಾರಿಯಾಗಿರುವ ಈರುಳ್ಳಿ, ಆಲೂಗಡ್ಡೆ, ಟೊಮೆಟೊ ದರ ಇಳಿಕೆ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರ ಕಾಯ್ದಿರಿಸಿದ ಈರುಳ್ಳಿ ದಾಸ್ತಾನು ಬಿಡುಗಡೆ ಮಾಡಿ ದರ ಸ್ಥಿರತೆಗೆ ಪ್ರಯತ್ನ ನಡೆಸಿದೆ. ಟೊಮೆಟೊ ದರ 50 ರಿಂದ 60 ರೂಪಾಯಿ ದಾಟಿದ್ದು, ಮಹಾನಗರಗಳಲ್ಲಿ ಈರುಳ್ಳಿ ಕೆಜಿಗೆ 57 ರೂ.ವರೆಗೂ ಇದೆ. ಇದನ್ನು ಇಳಿಕೆ ಮಾಡಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಆಲೂಗಡ್ಡೆ ದರ ಇಳಿಕೆಗೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಅನೇಕ ಮಹಾನಗರಗಳಲ್ಲಿ ಇರುವ 67,357 ಟನ್ ಈರುಳ್ಳಿ ಬಿಡುಗಡೆ ಮಾಡಿರುವುದಾಗಿ ಆಹಾರ ಸಚಿವಾಲಯ ತಿಳಿಸಿದೆ.