ನವದೆಹಲಿ: ದೇಶದಲ್ಲಿ ಅಬಕಾರಿ ಸುಂಕ ಕಡಿತ ಮತ್ತು ಅನೇಕ ರಾಜ್ಯಗಳಲ್ಲಿ ವ್ಯಾಟ್ ಕಡಿತದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರ ಗಣನೀಯವಾಗಿ ಇಳಿಕೆ ಕಂಡಿದೆ.
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ, ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅಡುಗೆ ಎಣ್ಣೆ ದರ ಪ್ರತಿ ಕೆಜಿಗೆ 20 ರೂ.ವರೆಗೂ ದರ ಕಡಿಮೆಯಾಗಿದೆ. ಖಾದ್ಯ ತೈಲ ಬೆಲೆಗಳು ಸಾಕಷ್ಟು ಗಣನೀಯವಾಗಿ ಕುಸಿದಿವೆ. ಹಲವು ಸ್ಥಳಗಳಲ್ಲಿ 20 ರೂ., 18 ರೂ., 10 ರೂ., 7 ರೂ.ಗಳಷ್ಟು ಇಳಿಕೆಯಾಗಿದೆ. ತಾಳೆ ಎಣ್ಣೆ, ಕಡಲೆಕಾಯಿ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ಎಣ್ಣೆಗಳ ಬೆಲೆ ಕುಸಿತ ಕಂಡಿದೆ ಎಂದು ಹೇಳಿದ್ದಾರೆ.