
ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ದೀಪಾವಳಿ ಹಬ್ಬದ ಹೊತ್ತಲ್ಲಿ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ದೇಶದ ದೊಡ್ಡ ಖಾದ್ಯ ತೈಲ ಕಂಪನಿಗಳು ದರ ಕಡಿತಕ್ಕೆ ಚಿಂತನೆ ನಡೆಸಿದ್ದು, ಬೆಲೆಯನ್ನು ಪ್ರತಿ ಲೀಟರಿಗೆ 4 ರಿಂದ 7 ರೂಪಾಯಿಯಷ್ಟು ಕಡಿಮೆ ಮಾಡಲು ನಿರ್ಧರಿಸಿವೆ.
ಪ್ರಮುಖ ಖಾದ್ಯತೈಲ ಕಂಪನಿಗಳಾದ ಆದಾನಿ ವಿಲ್ ಮಿರ್, ರುಚಿ ಸೋಯಾ ಇಂಡಸ್ಟ್ರೀಸ್, ಜೆಮಿನಿ ಎಡಿಬಲ್ಸ್ ಮೊದಲಾದ ತೈಲ ಕಂಪನಿಗಳು ಬೆಲೆಯನ್ನು ಕಡಿತಗೊಳಿಸುವೆ. ದೇಶದಲ್ಲಿ ಬಳಕೆಯಾಗುವ ಖಾದ್ಯತೈಲದ ಶೇಕಡ 60 ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದ ದೇಶಿಯ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದೆ. ಖಾದ್ಯತೈಲ ಬೆಲೆ ಇಳಿಕೆಗೆ ಆಮದು ಸುಂಕ ಕಡಿತಗೊಳಿಸುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ.