ಪೆಟ್ರೋಲ್ – ಡಿಸೇಲ್ ಬೆಲೆಗಳು ಗಗನಕ್ಕೇರಿವೆ. ಇದು ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ. ಈ ಮಧ್ಯೆ ಭಾರತೀಯರಿಗೆ ಶೀಘ್ರವೇ ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ಈ ವಾರ ನಡೆಯುವ ಸಭೆಯಲ್ಲಿ ಒಪೆಕ್, ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಕಚ್ಚಾ ತೈಲದ ಉತ್ಪಾದನೆ ಹೆಚ್ಚಾದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಇಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಭೆಯ ಮೊದಲು ಈ ಗುಂಪಿನ ಹೆಚ್ಚಿನ ದೇಶಗಳು ಉತ್ಪಾದನೆಯನ್ನು ಹೆಚ್ಚಿಸಿದರೆ, ತೈಲ ಬಳಕೆಯೂ ಹೆಚ್ಚಾಗುತ್ತದೆ ಎನ್ನುತ್ತಿವೆ.
ಕಚ್ಚಾ ತೈಲ ಉತ್ಪಾದನೆ ಹೆಚ್ಚಳದ ಬಗ್ಗೆ ಸೌದಿ ಅರೇಬಿಯಾ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಆದ್ರೆ ರಷ್ಯಾ ತೈಲ ಉತ್ಪಾದನೆ ಹೆಚ್ಚಿಸುವ ಮನಸ್ಥಿತಿಯಲ್ಲಿದೆ. ಗುರುವಾರ ಸಭೆ ನಡೆಯಲಿದ್ದು, ಸಭೆಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು 15 ಲಕ್ಷ ಬ್ಯಾರೆಲ್ ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ.
ಸಭೆಯಲ್ಲಿ ತೈಲ ಉತ್ಪಾದನೆ ಹೆಚ್ಚಿಸಲು ಒಪ್ಪಿಗೆ ಸಿಕ್ಕಲ್ಲಿ ಕೊರೊನಾ ನಂತ್ರ ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಕಚ್ಚಾ ತೈಲ ಉತ್ಪಾದಿಸುವ ದೇಶಗಳಿಗೆ ಕಳೆದ ಒಂದು ವರ್ಷ ಸವಾಲಿನ ವರ್ಷವಾಗಿತ್ತು.
ಜಾಗತಿಕ ಲಾಕ್‌ಡೌನ್ ನಂತರ ವಿಶ್ವಾದ್ಯಂತ ಇಂಧನ ಬೇಡಿಕೆ ದಾಖಲೆಯ ಮಟ್ಟಕ್ಕೆ ಇಳಿದಿದ್ದರಿಂದ, ಕಚ್ಚಾ ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದ್ರೆ ಲಾಕ್ ಡೌನ್ ನಂತ್ರ ಕಚ್ಚಾ ತೈಲ ಉತ್ಪಾದನಾ ಕಂಪನಿಗಳು ಲಾಭ ಪಡೆದಿವೆ.