ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲುಮುಟ್ಟಿದೆ. ಅದರಲ್ಲೂ ಲೀಟರ್ ಪೆಟ್ರೋಲ್ ದರ ಕೆಲವು ರಾಜ್ಯಗಳಲ್ಲಿ ಈಗಾಗಲೇ ನೂರು ರೂಪಾಯಿ ದಾಟಿದ್ದರೆ ಇನ್ನುಳಿದ ರಾಜ್ಯಗಳಲ್ಲಿ ನೂರು ರೂಪಾಯಿ ಆಸುಪಾಸಿನಲ್ಲಿದೆ.
ಇದರ ಮಧ್ಯೆ ವಿಶೇಷ ರೀತಿಯ ಪೆಟ್ರೋಲ್ ಲೀಟರ್ ಗೆ 160 ರೂಪಾಯಿಯಂತೆ ಮಾರಾಟವಾಗಿದ್ದು, ಅಚ್ಚರಿಯೆಂಬಂತೆ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಹೌದು, ಒಕ್ಟೇನ್ ಪ್ರೀಮಿಯಂ ಪೆಟ್ರೋಲ್ ಈ ದರಕ್ಕೆ ಮಾರಾಟವಾಗುತ್ತಿದೆ.
ಸದ್ಯಕ್ಕೆ ಹೈದರಾಬಾದಿನ ನಿರ್ದಿಷ್ಟ ಬಂಕುಗಳಲ್ಲಿ ಮಾತ್ರ ಈ ವಿಶೇಷ ರೀತಿಯ ಪೆಟ್ರೋಲ್ ಮಾರಾಟವಾಗುತ್ತಿದ್ದು, ಶೀಘ್ರದಲ್ಲೇ ಬೆಂಗಳೂರು, ಚೆನ್ನೈ, ಕೊಲ್ಕೊತ್ತಾ ಮತ್ತು ಭುವನೇಶ್ವರದಲ್ಲಿ ಸಹ ಸಿಗಲಿದೆ ಎಂದು ಹೇಳಲಾಗಿದೆ. ಈ ಪ್ರೀಮಿಯಂ ದರ್ಜೆಯ ಪೆಟ್ರೋಲ್ ವಾಹನದ ಎಂಜಿನ್ ದಕ್ಷತೆಯನ್ನು ವೃದ್ಧಿಸುವುದಲ್ಲದೆ ಸಂಚಾರವನ್ನು ಸುಗಮಗೊಳಿಸಲಿದೆ ಎಂದು ಹೇಳಲಾಗಿದೆ.