ಕೋವಿಡ್ ಕಾರಣದಿಂದ ಜಗತ್ತಿನಾದ್ಯಂತ ಸಾರಿಗೆ ವ್ಯವಸ್ಥೆ ಹಳ್ಳ ಹಿಡಿದಿದ್ದು, ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುವ ಮಂದಿಗೆ ಈ ಸಮಯ ಭಾರೀ ಯಾತನೆ ತಂದೊಡ್ಡುತ್ತಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಕಾರಣ ವಿಮಾನ ಸಂಚಾರ ಅಸ್ತವ್ಯಸ್ತವಾಗಿರುವ ಕಾರಣ ದುಬೈ ಮೂಲದ ಉದ್ಯಮಿಯೊಬ್ಬರು ತುರ್ತು ಪ್ರಯಾಣಕ್ಕಾಗಿ 55 ಲಕ್ಷ ರೂ. ತೆತ್ತು ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಷ್ತಾಕ್ ಅನ್ಫಾರ್ ಹೆಸರಿನ ಸುಗಂಧ ದ್ರವ್ಯದ ಉದ್ಯಮಿ ತಮ್ಮ ಉದ್ಯಮವನ್ನು 32 ದೇಶಗಳಲ್ಲಿ ಹೊಂದಿದ್ದಾರೆ.
ಎಚ್ಚರ….! ಕೊರೊನಾದಿಂದ ಚೇತರಿಸಿಕೊಂಡ ಪುರುಷರನ್ನು ಕಾಡ್ತಿದೆ ಈ ಸಮಸ್ಯೆ
ಅಸ್ಸಾಮ್‌ನ ಗೌಹಾಟಿಯಲ್ಲಿದ್ದ ಅನ್ಫಾರ್ ಅವರಿಗೆ ದುಬೈನಲ್ಲಿ ವಿಮಾನಗಳ ಆಗಮನ ರದ್ದು ಮಾಡಿರುವ ಕಾರಣ ಮರಳಿ ತೆರಳಲು ಕಷ್ಟವಾಗಿತ್ತು. ಆದರೆ ಕೋಟ್ಯಂತರ ರೂ.ಗಳ ಟರ್ನ್ ಓವರ್‌ನ ಉದ್ಯಮವನ್ನು ಹಾಗೇ ಬಿಟ್ಟು ಹೆಚ್ಚು ದಿನ ಇರಲು ಸಾಧ್ಯವಾಗದ ಕಾರಣ ಅನ್ಫಾರ್ ಗೌಹಾಟಿಯಿಂದ ದುಬೈಗೆ ಮರಳಲು 55 ಲಕ್ಷ ರೂ. ತೆತ್ತು ಚಾರ್ಟರ್ಡ್ ವಿಮಾನ ಬುಕ್ ಮಾಡಿಕೊಂಡಿದ್ದಾರೆ.
ಮುಕ್ತಾರ್ ತಂದೆ ಹಾಜಿ ಅನ್ಫಾರ್ ಅಲಿ ಸಹಬ್ ಅವರು 1950ರಲ್ಲಿ ಸ್ಥಾಪಿಸಿದ ಔಧ್ ಅಲ್ ಅನ್ಫಾರ್ ಸಂಸ್ಥೆಯ ಕಾರ್ಖಾನೆಗಳು ಬಹಳಷ್ಟಿದ್ದು, ಇಲ್ಲಿ ತಯಾರಾಗುವ ಸುಗಂಧ ದ್ರವ್ಯವನ್ನು 32ಕ್ಕೂ ಹೆಚ್ಚು ದೇಶಗಳಲ್ಲಿ ವಿತರಣೆ ಮಾಡಲಾಗುತ್ತದೆ.