ನವದೆಹಲಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನದ ಕೂಲಿ ಮೊತ್ತವನ್ನು 20 ರೂ. ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ನಿತ್ಯ ಕೂಲಿ ಹಣ 20 ರೂ. ನೀಡುತ್ತಿದೆ. ಮೊದಲು 289 ರೂ. ನೀಡಲಾಗುತ್ತಿತ್ತು. ಇದೀಗ ಏ.1 ರಿಂದ ಕೂಲಿ ಕಾರ್ಮಿಕರಿಗೆ ತುಂಬ ಅನುಕೂಲವಾಗಲಿದೆ. ಕೊನೆಗೂ ಸಹ ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ಬೇಡಿಕೆಗೆ ಮನ್ನಣೆ ನೀಡಿದೆ. ಕೂಲಿ ಕಾರ್ಮಿಕರು ಸಲಕರಣೆಗಳಿಗೆ ಹೆಚ್ಚುವರಿಯಾಗಿ 10 ರೂ. ಶುಲ್ಕ ನೀಡಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಜನತೆ ತಾವು ಗುಳೆ ಹೋಗುವ ಬದಲಾಗಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮ್ಮೂರಿನಲ್ಲಿಯೇ ಅವರು ಕೂಲಿ ಕೆಲಸ ಮಾಡಬಹುದು ನರೇಗಾದಡಿ ವಿಭಿನವಾದ ಕಾಮಗಾರಿಗಳನ್ನು ಸಹ ಮಾಡಲಾಗುತ್ತದೆ. ಕೆರೆಗಳನ್ನು ಹೂಳೆತ್ತುವುದು, ಬದು ನಿರ್ಮಾಣ ಮಾಡುವುದು, ಆಟದ ಮೈದಾನಗಳನ್ನು ನಿರ್ಮಿಸುವುದು, ಹೀಗೆ ನಾನಾ ಬಗೆಯ ಕಾಮಗಾರಿಗಳನ್ನು ಜನಸ್ನೇಹಿಯಾಗಿ ಮಾಡಲಾಗುತ್ತದೆ. ಹೀಗಾಗಿಯೇ ನರೇಗಾ ಯೋಜನೆ ತುಂಬ ಯಶಸ್ವಿಯಾಗಿದೆ. ಇದ್ದೂರಿನಲ್ಲಿಯೇ ಕೆಲಸ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ದೊರೆಯುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು: ಏಪ್ರಿಲ್ 1ರಿಂದ ಕೂಲಿಯನ್ನು 289ರೂ.ಗಳಿಂದ 309ರೂ.ಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೆ ಕೆಲಸದಲ್ಲಿ ಶೇ.50 ರಷ್ಟು ವಿನಾಯತಿ ಇರುತ್ತದೆ, ನಮೂನೆ-1 ರಲ್ಲಿ 18ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸುವುದು, ಅರ್ಜಿ ಜೊತೆಗೆ ವಾಸ್ ಫೋಟ್ ಆಳೆತೆಯ ಫೋಟೋ, ಅಧಾರ್ ಕಾರ್ಡ್ ರೇಷನ್ ಕಾಡ್ 9ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ರಾ.ಪಂಗೆ ನೀಡಿ, ಉದ್ಯೋಗ ಚೀಟಿಯನ್ನು ಪಡೆದುಕೊಳ್ಳಬಹುದು.
ಕೇಂದ್ರವು 2022-23ರ ಆರ್ಥಿಕ ವರ್ಷಕ್ಕೆ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮ NREGS ಅಡಿಯಲ್ಲಿ ಹೊಸ ವೇತನ ದರಗಳನ್ನು ಸೂಚಿಸಿದ್ದು, 21 ರಾಜ್ಯಗಳಲ್ಲಿ ಜಾರಿಗೆ ಬಂದಿದೆ.