
ಹಿರಿಯ ನಾಗರಿಕರಿಗೆ ಮಹತ್ವದ ಸುದ್ದಿಯೊಂದಿದೆ. ಎನ್ಪಿಎಸ್ ಚಂದಾದಾರರು ಸಂಪೂರ್ಣ ಹಣವನ್ನು ಒಂದೇ ಬಾರಿ ಹಿಂಪಡೆಯಬಹುದಾಗಿದೆ. ಶೀಘ್ರದಲ್ಲೇ ಈ ಸೌಲಭ್ಯ ಜಾರಿಗೆ ಬರಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪಿಂಚಣಿದಾರರಿಗೆ ಹೊಸ ಆಯ್ಕೆಯನ್ನು ನೀಡಲು ಸಿದ್ಧವಾಗಿದೆ.
ಸರ್ಕಾರ, ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯೋಜನೆ ನಡೆಸುತ್ತಿದೆ. ಜನರನ್ನು ಆಕರ್ಷಿಸಲು ಇದ್ರಲ್ಲಿ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಮಾಡುತ್ತದೆ. ಚಂದಾದಾರರ ಸಂಪೂರ್ಣ ಕಾಪರ್ಸ್ 5 ಲಕ್ಷ ರೂಪಾಯಿಯಾಗಿದ್ದರೆ ಈ ಮೊತ್ತವನ್ನು ಒಂದೇ ಬಾರಿ ಹಿಂಪಡೆಯಬಹುದು. ಈ ಹಿಂದೆ ಕೇವಲ 2 ಲಕ್ಷ ರೂಪಾಯಿ ಮಾತ್ರ ಹಿಂಪಡೆಯಬಹುದಿತ್ತು. ಅದಕ್ಕೂ ಕೆಲವೊಂದು ಷರತ್ತುಗಳಿದ್ದವು. ಅಲ್ಲದೆ ಮೂರು ವರ್ಷಗಳ ನಂತ್ರವೇ ಹಣ ಹಿಂಪಡೆಯಬೇಕಾಗಿತ್ತು. ಪೂರ್ಣ ಹೂಡಿಕೆಯ ಶೇಕಡಾ 25ರಷ್ಟನ್ನು ಮಾತ್ರ ಹಿಂಪಡೆಯಬಹುದಾಗಿತ್ತು. ಮಕ್ಕಳ ಶಿಕ್ಷಣ, ಮದುವೆ, ಮನೆ ಖರೀದಿ ಮತ್ತು ಗಂಭೀರ ಖಾಯಿಲೆ ಚಿಕಿತ್ಸೆಗಾಗಿ ಮಾತ್ರ ಹಣ ಪಡೆಯಬಹುದಾಗಿದೆ.
ಎನ್ಪಿಎಸ್ ನಲ್ಲಿ ಹೂಡಿಕೆ ಮಾಡುವವರ ಗರಿಷ್ಠ ವಯಸ್ಸನ್ನು 70 ವರ್ಷಕ್ಕೇರಿಸುವಂತೆ ಸಲಹೆ ನೀಡಲಾಗಿದೆ. ಈ ಹಿಂದೆ ಗರಿಷ್ಠ ವಯಸ್ಸು 65 ವರ್ಷವಾಗಿತ್ತು. ಇದಲ್ಲದೆ ಈ ವರ್ಷ 10 ಲಕ್ಷ ಹೊಸಬರನ್ನು ಈ ವ್ಯವಸ್ಥೆಯಡಿ ತರುವ ಗುರಿಯನ್ನು ಪಿಎಫ್ಆರ್ಡಿಎ ಹೊಂದಿದೆ. 60ನೇ ವಯಸ್ಸಿನಲ್ಲಿಯೇ ಎನ್ಪಿಎಸ್ ಯಲ್ಲಿ ಹೂಡಿಕೆ ಮಾಡಿದಲ್ಲಿ ಅವರು ಖಾತೆಯನ್ನು 75 ವರ್ಷ ವಯಸ್ಸಿನವರೆಗೆ ಇಟ್ಟುಕೊಳ್ಳಬಹುದು.