
ನವದೆಹಲಿ: ಪಿಂಚಣಿ ಕಾಯ್ದೆಯ ಪರಿಷ್ಕರಣೆ ಶೀಘ್ರ ನಡೆಯಲಿದ್ದು, ನಿವೃತ್ತಿ ಸೌಲಭ್ಯ ಸುಗಮಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ನಿವೃತ್ತಿ ಸಂದರ್ಭದಲ್ಲಿ ಸುಗಮವಾಗಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪಿಂಚಣಿ ಕಾಯ್ದೆ ಪರಿಷ್ಕರಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ನಿವೃತ್ತಿವೇತನ ನಿಧಿ ತರಲಾಗುವುದು. ಇದಲ್ಲದೇ ಪ್ರಾಧಿಕಾರದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಪ್ರತ್ಯೇಕಗೊಳಿಸುವ ಚಿಂತನೆಯೂ ನಡೆದಿದೆ.
ಪಿಂಚಣಿದಾರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ಹೆಚ್ಚುವರಿಯಾಗಿ ಹಣ ಪಡೆದುಕೊಳ್ಳಬಹುದಾಗಿದೆ. ಪರಿಷ್ಕೃತ ಮಸೂದೆಯಲ್ಲಿ NPS ಚಂದಾದಾರರು ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಯಲ್ಲಿ ಮಾಡಲು ಅವಕಾಶವಿದೆ ಎನ್ನಲಾಗಿದೆ.