
ಸ್ವಾವಲಂಭಿ ಭಾರತ ನಿರ್ಮಾಣದಡಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆಯಿಟ್ಟಿದೆ. ಭಾರತದಲ್ಲಿ ತಯಾರಿಸಲಾದ ಹವಾನಿಯಂತ್ರಣವನ್ನು ಮಾತ್ರ ಖರೀದಿ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ದೇಶಿ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಎಸಿ ಆಮದನ್ನು ನಿಷೇಧಿಸಿದೆ.
ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅನಿವಾರ್ಯವಲ್ಲದ ಸರಕುಗಳ ಆಮದನ್ನು ನಿರ್ಬಂಧಿಸಲು ಸರ್ಕಾರ ಬಯಸಿದೆ. ಫ್ರಿಜ್ ಜೊತೆ ಎಸಿ ಆಮದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಗುರುವಾರದಿಂದಲೇ ಇದು ಜಾರಿಗೆ ಬಂದಿದೆ. ಎಸಿಯನ್ನು ಮುಕ್ತ ವರ್ಗದಿಂದ ತೆಗೆದು ನಿರ್ಬಂಧಿತ ಪಟ್ಟಿಗೆ ಸೇರಿಸಲಾಗಿದೆ.
ಇದಕ್ಕೂ ಮೊದಲು, ಜೂನ್‌ನಲ್ಲಿ ಕಾರುಗಳು, ಬಸ್‌ಗಳು ಮತ್ತು ಮೋಟಾರ್ ಸೈಕಲ್‌ಗಳಲ್ಲಿ ಬಳಸುವ ಹೊಸ ನ್ಯೂಮ್ಯಾಟಿಕ್ ಟೈರ್‌ಗಳ ಆಮದು ಮಾಡಿಕೊಳ್ಳುವುದನ್ನು ಸರ್ಕಾರ ನಿಷೇಧಿಸಿತ್ತು. ಸರ್ಕಾರ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ರಫ್ತು ಮಾಡಲು ಅವಕಾಶ ನೀಡಿದೆ.
ಕೊರೊನಾ ಸಮಯದಲ್ಲಿ ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಬೇಡಿಕೆ ಹೆಚ್ಚುತ್ತಿದೆ. ಮತ್ತೊಂದೆಡೆ ಭಾರತೀಯ ಸ್ಯಾನಿಟೈಜರ್ ಕಂಪನಿಗಳು ತಮ್ಮ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಬಯಸುತ್ತಿವೆ. ಈ ವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು.