ಇನ್ನೂ ಪಾನ್ ಕಾರ್ಡ್ ಮಾಡಿಸಿಲ್ಲ ಎನ್ನುವವರಿಗೆ ಇಲ್ಲೊಂದು ನೆಮ್ಮದಿ ಸುದ್ದಿಯಿದೆ. ಇನ್ಮುಂದೆ ಅಂಚೆ ಕಚೇರಿಗೆ ಹೋಗಿ ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಈ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ನೀಡಿದೆ. ಸದ್ಯ ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಕೂಡ ಬಹಳ ಮುಖ್ಯವಾದ ದಾಖಲೆಯಾಗಿದೆ. ಪಾನ್ ಕಾರ್ಡನ್ನು ಹಣಕಾಸಿನ ವಹಿವಾಟಿನಲ್ಲಿ ಅಗತ್ಯವಾಗಿ ಬಳಸಲಾಗ್ತಿದೆ. ಮನೆಯಲ್ಲೇ ಕುಳಿತು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಪಾನ್ ಕಾರ್ಡ್ ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆ ತೆರೆಯಲು, 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಕಾರ್ಡ್ ಅಗತ್ಯ. ಆಸ್ತಿ ಖರೀದಿಗೂ ಪಾನ್ ಕಾರ್ಡ್ ನೀಡಬೇಕು.
ಆನ್ಲೈನ್ ನಲ್ಲಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಫೋಟೋ ಮತ್ತು ಇತರ ವಿವರಗಳನ್ನು ನೀಡಬೇಕಾಗುತ್ತದೆ. http://www.onlineservices.nsdl.com/ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಪಾನ್ ಗೆ ಅರ್ಜಿ ಸಲ್ಲಿಸಬಹುದು. ಪಾನ್ ಕಾರ್ಡ್ ಶುಲ್ಕವನ್ನು ಸಹ ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗುತ್ತದೆ.