ಭಾರತದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಅಧಾರ್ ಕಾರ್ಡ್ ಒಂದು. ಸರ್ಕಾರಿ ಕೆಲಸದಿಂದ ಹಿಡಿದು ಖಾಸಗಿ ಕೆಲಸದವರೆಗೆ ಅನೇಕ ಕಡೆ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ. ಬ್ಯಾಂಕ್ ಸೇರಿದಂತೆ ಬಹುತೇಕ ಕೆಲಸಗಳಿಗೆ ಆಧಾರ್ ಕಾರ್ಡನ್ನು ನೀವು ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ. ಹೆಚ್ಚಿನ ಜನರು ಕಾಗದದ ಮೇಲೆ ಬಣ್ಣದ ಮುದ್ರಣ ಹೊಂದಿರುವ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೆ ಈಗ ಆಧಾರ್ ಕಾರ್ಡ್ ಸಂಪೂರ್ಣವಾಗಿ ಹೊಸ ರೂಪದಲ್ಲಿ ಬರಲಿದೆ. ಇದು ಅತ್ಯಂತ ಸಣ್ಣ, ಪೋರ್ಟಬಲ್ ಮತ್ತು ಹೆಚ್ಚು ಬಾಳಿಕೆ ಬರುವಂತಹದ್ದಾಗಿರುತ್ತದೆ.
ಎಟಿಎಂನಂತೆ ಕಾಣುವ ಆಧಾರ್ ಕಾರ್ಡ್ ಬೇಕಾದರೆ ಯುಐಡಿಎಐಗೆ ಅರ್ಜಿ ಸಲ್ಲಿಸಬಹುದು. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಹೊಸ ಅಧಿಸೂಚನೆಯ ಪ್ರಕಾರ, ಹೊಸ ಆಧಾರ್ ಕಾರ್ಡ್‌ಗಳನ್ನು ಪಿವಿಸಿ ಕಾರ್ಡ್‌ಗಳಾಗಿ ಮರು ಮುದ್ರಿಸಲಾಗುವುದು. ಇದು ಎಟಿಎಂ ಕಾರ್ಡ್‌ನಂತೆ ಕಾಣಿಸುತ್ತದೆ. ಎಲ್ಲಾ ಸಮಯದಲ್ಲೂ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು.
ಈ ಆಧಾರ್ ಕಾರ್ಡ್ ಒದ್ದೆಯಾಗುತ್ತದೆ, ಹರಿಯುತ್ತದೆ ಎಂಬ ಭಯವಿಲ್ಲ. ಮನೆಯಲ್ಲೇ ಕುಳಿತು ನೀವು ಇದಕ್ಕೆ ಅರ್ಜಿ ಸಲ್ಲಿಸಬಹುದು. ಸ್ಪೀಡ್ ಪೋಸ್ಟ್ ಮೂಲಕ ನೇರವಾಗಿ ನಿಮ್ಮ ಮನೆಗೆ ಬರುತ್ತದೆ. ಈ ಕಾರ್ಡ್ ಗೆ ನೀವು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. uidai.gov.in/my-aadhaar/get-aadhaar.html ಗೆ ಹೋದ ನಂತ್ರ ಕೆಳಗೆ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು. 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಸೆಕ್ಯುರಿಟಿ ಕೋಡ್ ನಮೂದಿಸಬೇಕು. ನಂತ್ರ ಸೆಂಡ್ ಒಟಿಪಿ ಆಯ್ಕೆಯನ್ನು ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕು. ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ವಿವರ ಬರಲಿದ್ದು, ಅದನ್ನು ಪರಿಶೀಲಿಸಬೇಕು. ಎಲ್ಲವೂ ಸರಿಯಾಗಿದ್ದಾಗ ಹಣ ಪಾವತಿಸಬೇಕು. ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಪಾವತಿ ನಂತ್ರ ಸ್ಲಿಪ್ ಸಿಗಲಿದೆ. ಕಾರ್ಡ್ ಕೆಲವೇ ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ನಿಮಗೆ ಸಿಗಲಿದೆ.