ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ನೀಡ್ತಿದೆ. ಇದ್ರ ಮೂಲಕ ಮಹಿಳೆಯರು ಸ್ವಂತ ವ್ಯವಹಾರ ಶುರು ಮಾಡಬಹುದಾಗಿದೆ. ಬ್ಯಾಂಕ್ ಯೋಜನೆಯಡಿ ಮಹಿಳೆಯರಿಗೆ ಹಣಕಾಸಿನ ಸೌಲಭ್ಯ ನೀಡುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವಿಟರ್ ನಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಿದೆ.
ಮಹಿಳಾ ಉದ್ಯಮಿಗಳಿಗೆ ಪ್ರತಿ ಯೋಜನೆಗೆ ಗರಿಷ್ಠ 2.5 ಲಕ್ಷ ರೂಪಾಯಿ ಸಾಲವನ್ನು ನೀಡಲಾಗುತ್ತಿದೆ. ಸಾಲ ಮರುಪಾವತಿ ಅವಧಿ 10 ವರ್ಷವಾಗಿರುತ್ತದೆ. ಸಾಲದ ಮೇಲಿನ ಬಡ್ಡಿದರವನ್ನು ಎಸ್ ಐಡಿಬಿಐ ನಿರ್ಧರಿಸುತ್ತದೆ. ಸಾಲದ ಮೇಲಿನ ಬಡ್ಡಿ ಬದಲಾಗುತ್ತಿರುತ್ತದೆ.
ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಯಾವುದೇ ಭದ್ರತೆ ನೀಡುವ ಅಗತ್ಯವಿಲ್ಲ. ಈ ಯೋಜನೆ ಮಹಿಳಾ ಉದ್ಯಮಿಗಳಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಬ್ಯಾಂಕ್ ,ಮಹಿಳಾ ಉದ್ಯಮಿಗಳ ನಿಧಿ ಯೋಜನೆಯಡಿ ಸಾಲ ನೀಡುತ್ತದೆ. ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು.
ಪಿಎನ್ಬಿ ಮಹಿಳಾ ಉದ್ಯಮಿ ನಿಧಿ ಸ್ಕೀಂ,ಪಿಎನ್ಬಿ ಮಹಿಳಾ ಸಮೃದ್ಧಿ ಯೋಜನೆ,ಕ್ರೇಚ್ ಸ್ಕೀಂ ಅಡಿಯಲ್ಲಿ ಬ್ಯಾಂಕ್ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ.