alex Certify ಗಮನಿಸಿ…! ಮೊಬೈಲ್ ಸಿಮ್ ಕಾರ್ಡ್: ಗ್ರಾಹಕರಿಗೆ ಹೊಸ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಮೊಬೈಲ್ ಸಿಮ್ ಕಾರ್ಡ್: ಗ್ರಾಹಕರಿಗೆ ಹೊಸ ನಿಯಮ

Indian telecoms ask government to approve remote SIM registration ...

ಮೊಬೈಲ್ ಸಿಮ್‌ ಕಾರ್ಡ್‌ ಹೊಂದಿರುವ ಗ್ರಾಹಕರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಅದರಲ್ಲೂ ನೌಕರರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಮ್ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳಿಗೆ ಈ ನೂತನ ನಿಯಮಾವಳಿ ಅನ್ವಯವಾಗುತ್ತದೆ.

ನಕಲಿ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಖರೀದಿಸಿ ವಂಚನೆ ಪ್ರಕರಣಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಸಿಮ್‌ ನೀಡುವ ಸಂದರ್ಭದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳ ಕುರಿತು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುತ್ತಿದೆ.

ಅಲ್ಲದೆ ಸಿಮ್‌ ಖರೀದಿ ಬಳಿಕ ಆಕ್ಟೀವ್‌ ಆದ ವೇಳೆ ಮತ್ತೊಮ್ಮೆ ವೆರಿಫಿಕೇಷನ್‌ ಮಾಡಲಾಗುತ್ತದೆ. ಜೊತೆಗೆ ಆರು ತಿಂಗಳಿಗೊಮ್ಮೆ ಇಂತಹ ಸಿಮ್‌ ಗಳ ವೆರಿಫಿಕೇಷನ್‌ ನಡೆಯಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅನುಮಾನ ಕಂಡು ಬಂದರೆ ಅಂತಹ ಸಿಮ್‌ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಇದರ ಜೊತೆಗೆ ಸಿಮ್‌ ಖರೀದಿಸುವಾಗ ನಿರ್ಲಕ್ಷಿಸಬಹುದಾದ ಸಣ್ಣಪುಟ್ಟ ತಪ್ಪುಗಳಾಗಿದ್ದಲ್ಲಿ ಅಂತವರಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನೂ ಕಡಿಮೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...