ಸಿಮ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಅದರಲ್ಲೂ ನೌಕರರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಮ್ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳಿಗೆ ಈ ನೂತನ ನಿಯಮಾವಳಿ ಅನ್ವಯವಾಗಲಿದೆ.
ನಕಲಿ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ವಂಚನೆ ಪ್ರಕರಣಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಸಿಮ್ ನೀಡುವ ಸಂದರ್ಭದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳ ಕುರಿತು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುತ್ತಿದೆ.
ಅಲ್ಲದೆ ಸಿಮ್ ಖರೀದಿ ಬಳಿಕ ಆಕ್ಟೀವ್ ಆದ ವೇಳೆ ಮತ್ತೊಮ್ಮೆ ವೆರಿಫಿಕೇಷನ್ ಮಾಡಲಾಗುತ್ತದೆ. ಜೊತೆಗೆ ಆರು ತಿಂಗಳಿಗೊಮ್ಮೆ ಇಂತಹ ಸಿಮ್ ಗಳ ವೆರಿಫಿಕೇಷನ್ ನಡೆಯಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅನುಮಾನ ಕಂಡು ಬಂದರೆ ಅಂತಹ ಸಿಮ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಇದರ ಜೊತೆಗೆ ಸಿಮ್ ಖರೀದಿಸುವಾಗ ನಿರ್ಲಕ್ಷಿಸಬಹುದಾದ ಸಣ್ಣಪುಟ್ಟ ತಪ್ಪುಗಳಾಗಿದ್ದಲ್ಲಿ ಅಂತವರಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನೂ ಕಡಿಮೆ ಮಾಡಲಾಗಿದೆ.