
ಗಳಿಸಿದ ಹಣ ಸುರಕ್ಷಿತವಾಗಿರಬೇಕು ಹಾಗೆ ಅದಕ್ಕೆ ಹೆಚ್ಚಿನ ಬಡ್ಡಿ ಸಿಗಬೇಕೆಂದು ಜನರು ಬಯಸ್ತಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಿಪಿಎಫ್ ಖಾತೆಯಲ್ಲಿ ಈ ಸೌಲಭ್ಯ ನೀಡ್ತಿದೆ. ಇದ್ರಲ್ಲಿ ಗ್ರಾಹಕರಿಗೆ ತೆರಿಗೆ ಮುಕ್ತ ರಿಟರ್ನ್ ಸಿಗ್ತಿದೆ. ಇತರ ಯೋಜನೆಗಳಿಗೆ ಹೋಲಿಕೆ ಮಾಡಿದ್ರೆ ಪಿಪಿಎಫ್ ನಲ್ಲಿ ಹೆಚ್ಚಿನ ಬಡ್ಡಿ ಸಿಗ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವಿಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಭವಿಷ್ಯದ ಬಗ್ಗೆ ಚಿಂತೆ ಮಾಡುವ ಜನರು ಭಯಪಡಬೇಕಿಲ್ಲ. ಆಕರ್ಷಕ ಬಡ್ಡಿಯೊಂದಿಗೆ ತೆರಿಗೆ ಮುಕ್ತ ಆದಾಯ ಪಡೆಯಲು ಇಲ್ಲಿದೆ ಅವಕಾಶವೆಂದು ಪಿ ಎನ್ ಬಿ ಟ್ವೀಟ್ ಮಾಡಿದೆ. ಹೆಚ್ಚಿನ ಮಾಹಿತಿಗೆ https://www.pnbindia.in/public-provident-fund.html ಕ್ಲಿಕ್ ಮಾಡುವಂತೆ ಹೇಳಿದೆ.
HDFC ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ
ಪಿಪಿಎಫ್ ಕೇಂದ್ರ ಸರ್ಕಾರದ ಯೋಜನೆ. ಪಿಪಿಎಫ್ ಖಾತೆ ಹೊಂದಿರುವವರು ವರ್ಷಕ್ಕೆ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಕನಿಷ್ಠ ಹೂಡಿಕೆ 500 ರೂಪಾಯಿಯಾಗಿದೆ. ಯೋಜನೆ ಅವಧಿ 15 ವರ್ಷಗಳು. ಇದನ್ನು 5 ವರ್ಷ ಮತ್ತೆ ವಿಸ್ತರಿಸಬಹುದು. ಶೇಕಡಾ 7.1ರ ದರದಲ್ಲಿ ಬಡ್ಡಿ ಸಿಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಮಾತ್ರವಲ್ಲ ಬೇರೆ ಅನೇಕ ಬ್ಯಾಂಕ್ ಗಳು ಈ ಯೋಜನೆಯನ್ನು ಹೊಂದಿವೆ.