ಇದು ಡಿಜಿಟಲ್ ಯುಗ. ಹಣದ ವಹಿವಾಟು ಆನ್ಲೈನ್ ನಲ್ಲಿ ನಡೆಯುತ್ತದೆ. ಅಂಗಡಿಗಳಿಗೆ ಹೋಗಿ ಪೇಟಿಎಂ ಮೂಲಕ ಪೇಮೆಂಟ್ ಮಾಡಿದ ನಂತ್ರ ಹಣ ಖಾತೆಗೆ ವರ್ಗವಾಯ್ತಾ ಎಂದು ಚೆಕ್ ಮಾಡಬೇಕಾಗುತ್ತದೆ. ಆದ್ರೆ ಮೊಬೈಲ್ ತೆಗೆದು ಚೆಕ್ ಮಾಡುವ ಅವಶ್ಯಕತೆ ಇಲ್ಲ. ಪೇಟಿಎಂ ಸೌಂಡ್ ಬಾಕ್ಸ್ ನಿಮಗೆ ಸಹಾಯ ಮಾಡಲಿದೆ.
ಅನೇಕ ಅಂಗಡಿಗಳಲ್ಲಿ ಈಗಾಗಲೇ ಪೇಟಿಎಂ ಸೌಂಡ್ ಬಾಕ್ಸ್ ಕಾಣಬಹುದು. ಪೇಟಿಎಂ ಮೂಲಕ ಹಣ ಪಾವತಿಸಿದ ತಕ್ಷಣ, ಈ ಧ್ವನಿ ಪೆಟ್ಟಿಗೆಯಿಂದ ಕ್ರೆಡಿಟ್ ಮೊತ್ತದ ಮಾಹಿತಿ ಬರುತ್ತದೆ. ಈ ಸೌಂಡ್ ಬಾಕ್ಸ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಕೊರೊನಾ ವೈರಸ್ ಸೋಂಕಿನ ಮಧ್ಯೆ ಸೌಂಡ್ ಬಾಕ್ಸ್ ಪ್ರಾರಂಭಿಸಿದೆ. ಗ್ರಾಹಕರು ಹಣವನ್ನು ವರ್ಗಾವಣೆ ಮಾಡಿದ ತಕ್ಷಣ, ಈ ಧ್ವನಿ ಪೆಟ್ಟಿಗೆಯು ಪಾವತಿಯನ್ನು ಸ್ವೀಕರಿಸುವ ಸಂದೇಶವನ್ನು ನೀಡುತ್ತದೆ.
SBI ಗ್ರಾಹಕರಿಗೆ ಗುಡ್ ನ್ಯೂಸ್: ಜನ್ ಧನ್ ಖಾತೆದಾರರಿಗೆ ಸಿಗುತ್ತಿದೆ ದೊಡ್ಡ ʼಉಡುಗೊರೆʼ
ಪೇಟಿಎಂ ಸೌಂಡ್ ಬಾಕ್ಸ್ ಖರೀದಿಸಲು ಎರಡು ಯೋಜನೆಗಳಿವೆ. ಮೊದಲ ಯೋಜನೆಯಲ್ಲಿ 499 ರೂಪಾಯಿ ಪಾವತಿ ಮಾಡಬೇಕು. ಪ್ರತಿ ತಿಂಗಳು ನೋಟಿಫಿಕೇಷನ್ ಪಡೆಯಲು 125 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಎರಡನೇ ಯೋಜನೆ ಬೆಲೆ 1999 ರೂಪಾಯಿ. ಇದರಲ್ಲಿ 18 ತಿಂಗಳವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ. ಪೇಟಿಎಂ ಸೌಂಡ್ ಬಾಕ್ಸ್ ಖರೀದಿಸಲು ಪೇಟಿಎಂ ಅಪ್ಲಿಕೇಶನ್‌ಗೆ ಹೋಗಬೇಕಾಗುತ್ತದೆ.