ಕೊರೊನಾ ಸಮಯದಲ್ಲಿ ಹೆಚ್ಚಿನ ಬ್ಯಾಂಕುಗಳು ತಮ್ಮ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಗ್ರಾಹಕರಿಗೆ ತಲುಪಿಸುತ್ತಿವೆ. ಇನ್ಮುಂದೆ ಗೃಹ ಸಾಲ ತೆಗೆದುಕೊಳ್ಳಲು ಬ್ಯಾಂಕ್ ಸುತ್ತಬೇಕಾಗಿಲ್ಲ. ಖಾಸಗಿ ವಲಯದ ಕೊಟಕ್ ಮಹೀಂದ್ರಾ ಬ್ಯಾಂಕ್ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಗ್ರಾಹಕರು 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗೃಹ ಸಾಲ ಪಡೆಯಲಿದ್ದಾರೆ.
ಆನ್ಲೈನ್ ನಲ್ಲಿ ಗ್ರಾಹಕರು ಎಲ್ಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈಗಿರುವ ಹಾಗೂ ಹೊಸ ಗ್ರಾಹಕರಿಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಆನ್ಲೈನ್ ಮೂಲಕ ಗೃಹ ಸಾಲ ನೀಡಲಿದೆ. ಸಂಬಳ ಪಡೆಯುವ ಉದ್ಯೋಗಿಗಳು, ಉದ್ಯಮಿಗಳು ಮತ್ತು ವೃತ್ತಿಪರರು ಸೇರಿದಂತೆ ಇತರ ಗ್ರಾಹಕರಿಗೆ ಈ ಸಾಲ ಸೌಲಭ್ಯ ಲಭ್ಯವಿದೆ.
ಕೊಟಕ್ ಡಿಜಿ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸುಗಮ ಮತ್ತು ಸರಳವಾಗಿದೆ. ಅರ್ಜಿದಾರರು ww.kotak.com ನಲ್ಲಿ ಕೆಲವು ವೈಯಕ್ತಿಕ ಮತ್ತು ಆಸ್ತಿ ವಿವರಗಳನ್ನು ಒದಗಿಸಬೇಕಾಗುತ್ತದೆ. ನಂತರ ಬ್ಯಾಂಕ್ ಸಿಬ್ಬಂದಿ ಆನ್ಲೈನ್ ಮೂಲಕ ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾರೆ. ಆನ್‌ಲೈನ್‌ನಲ್ಲಿ ಡಿಜಿಟಲ್ ಅರ್ಜಿ ನಮೂನೆ ಮತ್ತು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದಾಗ, ಸಾಲವನ್ನು 48 ಗಂಟೆಗಳ ಒಳಗೆ ಅನುಮೋದಿಸಲಾಗುವುದು.
ಕೊಟಕ್ ಡಿಜಿ ಗೃಹ ಸಾಲವನ್ನು ಪ್ರಾರಂಭಿಸಿರುವುದು ಖುಷಿ ನೀಡಿದೆ. ಇದು ಸಂಪೂರ್ಣವಾಗಿ ಆನ್‌ಲೈನ್ ಅನುಮೋದನೆ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಗ್ರಾಹಕರು ತಮ್ಮ ಕನಸಿನ ಮನೆಯನ್ನು ಕೆಲವೇ ಕ್ಲಿಕ್‌ಗಳ ಮೂಲಕ ನಿರ್ಮಿಸಬಹುದೆಂದು ಕೊಟಕ್ ಮಹೀಂದ್ರಾ ಬ್ಯಾಂಕಿನ ಗ್ರಾಹಕ ಸ್ವತ್ತುಗಳ ಅಧ್ಯಕ್ಷರಾದ ಅಂಬು ಚಾಂದನಾ ಹೇಳಿದ್ದಾರೆ.