alex Certify EPFO ಸದಸ್ಯರಿಗೆ ಬಿಗ್ ರಿಲೀಫ್: ಮುಂಗಡ ರೂಪದಲ್ಲಿ ಹೆಚ್ಚು ಹಣ ಹಿಂಪಡೆಯಲು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

EPFO ಸದಸ್ಯರಿಗೆ ಬಿಗ್ ರಿಲೀಫ್: ಮುಂಗಡ ರೂಪದಲ್ಲಿ ಹೆಚ್ಚು ಹಣ ಹಿಂಪಡೆಯಲು ಅವಕಾಶ

ದೇಶದಲ್ಲಿ ಕೋವಿಡ್‌ನ ಎರಡನೇ ಅಲೆ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ತನ್ನ ಐದು ಕೋಟಿ ಚಂದಾದಾರರಿಗೆ ಕೋವಿಡ್-19 ಮುಂಗಡ ಹಿಂಪಡೆದುಕೊಂಡು ಸಾಂಕ್ರಮಿಕದ ಸಂಕಷ್ಟದ ದಿನಗಳಲ್ಲಿ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಹೆಚ್ಚು ಹಣವನ್ನು ಹಿಂಪಡೆಯಲು ಅವಕಾಶ ಕೊಡುವುದನ್ನು 2020ರ ಮಾರ್ಚ್‌ನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೋವಿಡ್‌-19 ನೆರವಿನ ಪ್ಯಾಕೇಜ್ ರೂಪದಲ್ಲಿ ನೀಡಲಾಗಿತ್ತು.

“ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಇಪಿಎಫ್‌ಓ ತನ್ನ ಚಂದಾದಾರರಿಗೆ ಮುಂಗಡವಾಗಿ ನಾನ್‌-ರೀಫಂಡಬಲ್‌ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ” ಎಂದು ಕಾರ್ಮಿಕ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂಬಂಧ ಕಾರ್ಮಿಕ ಹಾಗೂ ನೌಕರರ ಭವಿಷ್ಯನಿಧಿ ಯೋಜನೆ, 1952 ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ಸಬ್‌-ಪ್ಯಾರಾ (3) ಪ್ಯಾರಾಗ್ರಾಫ್ 68ಎಲ್‌, ನೋಟಿಫಿಕೇಷನ್ ಮೂಲಕ ಅಧಿಕೃತ ಗೆಜೆಟ್‌ನಲ್ಲಿ ಸೇರಿಸಲಾಗಿದೆ.

ಈ ಯೋಜನೆಯಡಿ, ನಾನ್‌-ರೀಫಂಡಬಲ್ ಹಿಂಪಡೆತವನ್ನು ಮೂರು ತಿಂಗಳ ಮೂಲ ವೇತನ ಹಾಗೂ ತುಟ್ಟಿ ಭತ್ಯೆ (ಮೂಲ ವೇತನದ ಭಾಗ) ಅಥವಾ ಸದಸ್ಯರ ಇಪಿಎಫ್ ಖಾತೆಯಲ್ಲಿ ಕ್ರೆಡಿಟ್ ಆಗಿರುವ ಹಣದ 75%ದಷ್ಟು ಹಣವನ್ನು ತೆಗೆದುಕೊಳ್ಳಬಹುದಾಗಿದೆ.

ಮಾಸಿಕ 15,000 ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಮಂದಿಗೆ ಈ ನಡೆಯು ಬಹಳ ಅನುಕೂಲವಾಗಲಿದೆ. ಇದುವರೆಗೂ ಇಪಿಎಫ್‌ 76.31 ಲಕ್ಷ ಕೋವಿಡ್‌-19 ಮುಂಗಡ ಕ್ಲೇಮ್‌ಗಳನ್ನು ಕ್ಲಿಯರ್‌ ಮಾಡಿ ಒಟ್ಟಾರೆ 18,698.15 ಕೋಟಿ ರೂ.ಗಳನ್ನು ವಿತರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...