ಡಿಜಿಟಲ್ ಪಾವತಿ ಸೇವೆಗಳನ್ನು ಪರಿಚಯಿಸಿದ ಬೆನ್ನಿಗೇ ಇತರ ಆರ್ಥಿಕ ಸೇವೆಗಳನ್ನು ತನ್ನ ಬಳಕೆದಾರರಿಗೆ ಕೊಡಮಾಡಲು ಮುಂದಾಗಿದೆ ಮಲ್ಟಿಮಿಡಿಯಾ ಮೆಸೇಜ್ ಸೇವಾದಾರ ವಾಟ್ಸಾಪ್.
ತಿಂಗಳ ಅಂತ್ಯದಿಂದ ಆಚೆಗೆ ವಾಟ್ಸಾಪ್ ಮೂಲಕ ವಿಮೆ ಹಾಗೂ ಪಿಂಚಣಿ ಸೇವೆಗಳಿಗೆ ಚಂದಾದಾರರಾಗಬಹುದಾಗಿದೆ. ಆರೋಗ್ಯ ವಿಮೆ ಉತ್ಪನ್ನಗಳು ಸಣ್ಣ ಟಿಕೆಟ್ ಗಾತ್ರದಲ್ಲಿ ಲಭ್ಯವಿರಲಿವೆ. ಇದೇ ವೇಳೆ ಕಿರು ಪಿಂಚಣಿ ಉತ್ಪನ್ನಗಳನ್ನು ಸಹ ವಾಟ್ಸಾಪ್ ಮೂಲಕ ಖರೀದಿ ಮಾಡಬಹುದಾಗಿದೆ.
ಇದಕ್ಕೆಂದು ವಾಟ್ಸಾಪ್ ಎಸ್‌ಬಿಐನ ವಿಮಾ ಸೇವೆಗಳ ಜೊತೆಗೆ ಇತರೆ ಸಂಸ್ಥೆಗಳ ವಿಮಾ ಸೇವೆಗಳ ಪ್ಲಾಟ್ಫಾರಂ ಆಗಲು ಅನುಮತಿ ಪಡೆದುಕೊಂಡಿದೆ. ಇದೇ ವೇಳೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮುಖಾಂತರ ವಾಟ್ಸಾಪ್ ಬಳಸಿಕೊಂಡು ರಾಷ್ಟ್ರೀಯ ಪಿಂಚಣಿ ಸೇವೆಗೆ ನೀವು ಚಂದಾದಾರರಾಗಬಹುದಾಗಿದೆ.
ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕುಗಳ ಜೊತೆಗೆ ಸಹಯೋಗದೊಂದಿಗೆ ವಾಟ್ಸಾಪ್ ಪೇ ಸೌಲಭ್ಯವನ್ನು ಇದೇ ವಾರದ ಆರಂಭದಲ್ಲಿ ವಾಟ್ಸಾಪ್ ಪರಿಚಯಿಸಿದೆ.