ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಮಾಡುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಗ್ರಾಹಕರು ತಮ್ಮ ನೋಂದಾಯಿತ ಸಂಖ್ಯೆಗಳಿಂದ ಸಂದೇಶ ಕಳುಹಿಸಿ ಇಂಧನ ರೀಫಿಲ್ ಮಾಡಿಸಿಕೊಳ್ಳಬಹುದಾಗಿದೆ.
ಇದೀಗ ವಾಟ್ಸಾಪ್ ಸಂದೇಶದ ಮೂಲಕವೂ ಸಹ ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದಾಗಿದೆ. https://iocl.com/Products/Indanegas.aspx ಜಾಲತಾಣಕ್ಕೆ ಭೇಟಿ ಕೊಡುವ ಮೂಲಕವೂ ಸಹ ಗ್ಯಾಸ್ ಬುಕಿಂಗ್ ಮಾಡಬಹುದು.
ಇಲ್ಲವಾದಲ್ಲಿ ಇಂಡೇನ್‌ನ ಕಿರು ತಂತ್ರಾಂಶವನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಮೂಲಕವೂ ಸಹ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡಬಹುದು.
ವಾಟ್ಸಾಪ್ ಮೆಸೆಂಜರ್‌ನಲ್ಲಿ REFILL ಎಂದು ಟೈಪ್ ಮಾಡಿ, ಅದನ್ನು 7588888824 ಸಂಖ್ಯೆಗೆ ಕಳುಹಿಸಬಹುದಾಗಿದೆ. ಇದಾದ ಬಳಿಕ ನಿಮ್ಮ ಸಂಖ್ಯೆಗೆ ಡೆಲಿವರಿ ಅಥೆಂಟಿಕೇಶನ್ ಕೋಡ್ ಒಟಿಪಿ ರೂಪದಲ್ಲಿ ಬರಲಿದೆ. ಆ ಕೋಡ್ ಅನ್ನು ಡಿಲಿವರಿ ತರುವ ವ್ಯಕ್ತಿಯೊಂದಿಗೆ ಶೇರ್ ಮಾಡಿಕೊಳ್ಳಬಹುದಾಗಿದೆ. ಈ ವ್ಯವಸ್ಥೆಯನ್ನು ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಜಾರಿಗೆ ತರಲಾಗಿದೆ.
ಗ್ಯಾಸ್ ಏಜೆನ್ಸಿಗೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ಬದಲಿಸಬೇಕಾದಲ್ಲಿ, ಡೆಲಿವರಿ ಏಜೆಂಟ್ ಬಳಿ ಈ ಬಗ್ಗೆ ಮನವಿ ಮಾಡಿಕೊಂಡಲ್ಲಿ ಖುದ್ದು ಆತನಿಂದಲೇ ಸಂಖ್ಯೆಯ ವಿವರ ಬದಲಿಸಿಕೊಳ್ಳಬಹುದಾಗಿದೆ.