alex Certify GST ವ್ಯಾಪ್ತಿಗೆ ಪೆಟ್ರೋಲ್​ – ಡೀಸೆಲ್ ತರಬಹುದೆಂಬ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ‌ʼಬಿಗ್‌ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ವ್ಯಾಪ್ತಿಗೆ ಪೆಟ್ರೋಲ್​ – ಡೀಸೆಲ್ ತರಬಹುದೆಂಬ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ‌ʼಬಿಗ್‌ ಶಾಕ್ʼ

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆ ಕಾಣುತ್ತಲೇ ಇದ್ದು ಶ್ರೀಸಾಮಾನ್ಯರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ವಿಪಕ್ಷಗಳು ಕೇಂದ್ರ ಸರ್ಕಾರದ ಬಳಿ ಪೆಟ್ರೋಲ್​ ಹಾಗೂ ಡೀಸೆಲ್​ಗಳನ್ನ ಜಿಎಸ್​ಟಿ ವ್ಯಾಪ್ತಿಗೆ ತನ್ನಿ ಎಂದು ಬೇಡಿಕೆ ಇಟ್ಟಿದ್ದವು.

ಆದರೆ ಈ ವಿಚಾರವಾಗಿ ಮಾತನಾಡಿದ ಬಿಜೆಪಿ ಸಂಸದ ಸುಶಿಲ್​ ಕುಮಾರ್​ ಮೋದಿ ಮುಂದಿನ 8 ರಿಂದ 10 ವರ್ಷಗಳ ಕಾಲ ಪೆಟ್ರೋಲ್​ ಹಾಗೂ ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತರೋದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೆಟ್ರೋಲ್​ ಹಾಗೂ ಡೀಸೆಲ್​​ಗಳನ್ನ ಜಿಎಸ್​ಟಿ ವ್ಯಾಪ್ತಿಗೆ ತರುವ ವಿಚಾರ ಪದೇ ಪದೇ ಕೇಳಿ ಬರ್ತಿದೆ. ನಾನು ಜಿಎಸ್​ಟಿನೊಂದಿಗೆ ಬಹಳ ಸಮಯದಿಂದ ಸಂಬಂಧ ಹೊಂದಿದ್ದೇನೆ. ಹೀಗಾಗಿ ನಾನು ಸದನದಲ್ಲಿ ಈ ಪ್ರಶ್ನೆಯನ್ನ ಕೇಳಲು ಇಚ್ಛಿಸುತ್ತಿದ್ದೇನೆ. ಒಂದು ವೇಳೆ ಪೆಟ್ರೋಲ್​ ಹಾಗೂ ಡೀಸೆಲ್​ಗಳನ್ನ ಜಿಎಸ್​ಟಿ ವ್ಯಾಪ್ತಿಗೆ ಸೇರಿಸಿದ್ರೆ ಪ್ರತಿ ರಾಜ್ಯದ ಆದಾಯಗಳಲ್ಲಿ ಉಂಟಾಗುವ 2 ಲಕ್ಷ ಕೋಟಿ ಹಣವನ್ನ ಸರ್ಕಾರಕ್ಕೆ ಯಾರು ತುಂಬಿಸಿಕೊಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...